ಉಡುಪಿ: ಪಿಂಚಣಿ ಅದಾಲತ್
Update: 2016-10-14 23:46 IST
ಉಡುಪಿ, ಅ.14: ಉಡುಪಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮವು ತಾಲೂಕು ಕಚೇರಿ ಆವರಣದ ಆಫೀಸರ್ಸ್ ಕ್ಲಬ್ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಹಾಗೂ ಧಾರ್ಮಿಕ, ದತ್ತಿ ಇಲಾಖೆ ಸಹಾಯಕ ಆಯುಕ್ತ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ಜರಗಿತು.
ಅದಾಲತ್‌ನಲ್ಲಿ 25 ಸಂಧ್ಯಾ ಸುರಕ್ಷಾ ವೇತನ, 6 ವಿಧವಾ ವೇತನ, 1 ವೃದ್ಧಾಪ್ಯ ವೇತನ, 1 ಅಂಗವಿಕಲ ವೇತನ ಹಾಗೂ 2 ಮನಸ್ವಿನಿ ವೇತನ ಒಟ್ಟು 35 ಪ್ರಕರಣಗಳ ವಿಚಾರಣೆ ನಡೆಸಲಾಯಿತು. ಈ ಪ್ರಕರಣಗಳ ಪೈಕಿ 11 ಪ್ರಕರಣಗಳನ್ನು ಮಂಜೂರು ಮಾಡಲಾಯಿತು ಹಾಗೂ 15 ಪ್ರಕರಣಗಳನ್ನು ತಿರಸ್ಕರಿಸಲಾಯಿತು. 9 ಜನ ಗೈರು ಹಾಜರಿದ್ದರು.
ಉಡುಪಿ ತಹಶೀಲ್ದಾರ್ ಕೆ.ಮಹೇಶ್ಚಂದ್ರ, ಉಪತಹಶೀಲ್ದಾರ್ ಕೆ.ಗೋಪಾಲ ಸೇರಿಗಾರ್, ಕಂದಾಯ ನಿರೀಕ್ಷಕ ಸುಧಾಕರ್ ಶೆಟ್ಟಿ, ಹೋಬಳಿಯ ಗ್ರಾಮಕರಣಿಕರು ಉಪಸ್ಥಿತರಿದ್ದರು.