×
Ad

ಚೊಕ್ಕಬೆಟ್ಟು ಸಿರಾತೇ ಮುಸ್ತಖೀಮ್ ಮದ್ರಸ ಮಕ್ಕಳ ಪ್ರತಿಭಾ ಕಾರ್ಯಕ್ರಮ

Update: 2016-10-14 23:47 IST

ಮಂಗಳೂರು, ಅ.14: ಎಸ್‌ಕೆಎಸ್‌ಎಮ್ ಚೊಕ್ಕಬೆಟ್ಟು ಇದರ ಅಧೀನ ಸಂಸ್ಥೆ ಸಿರಾತೇ ಮುಸ್ತಖೀಮ್ ಮದ್ರಸ ಚೊಕ್ಕಬೆಟ್ಟು ಮತ್ತು ಸಲಫಿ ಗರ್ಲ್ಸ್ ಮೂವ್ ಮೆಂಟ್ ಚೊಕ್ಕಬೆಟ್ಟು ಇದರ ಜಂಟಿ ಆಶ್ರಯದಲ್ಲಿ ಮದ್ರಸ ಮಕ್ಕಳ ಪ್ರತಿಭಾ ಕಾರ್ಯಕ್ರಮ ಮತ್ತು ಪೇರಟ್ಸ್ ಮೀಟಿಂಗ್ ಎಮ್.ಜೆ.ಎಂ ಹಾಲ್ ಚೊಕ್ಕಬೆಟ್ಟುವಿನಲ್ಲಿ ನಡೆಯಿತು.

ಮದ್ರಸ ವಿದ್ಯಾರ್ಥಿ ನಿಶಾದ್ ಅಬ್ದುಲ್ ಖಾದರ್ ಕುರ್‌ಆನ್ ಪಠಿಸಿದರು. ವಿದ್ಯಾರ್ಥಿನಿ ಖತೀಜ ರಯೀಝಾ ಸ್ವಾಗತಿಸಿದಳು. ಆನಂತರ ಮದ್ರಸ ವಿದ್ಯಾರ್ಥಿಗಳಿಂದ ದುಆ, ಭಾಷಣ, ಗ್ರೂಪ್ ಹಾಡು, ಆಕ್ಷನ್ ಹಾಡು, ಕಿರಾಅತ್ ಮೊದಲಾದ ಕಾರ್ಯಕ್ರಮ ನಡೆಯಿತು.

ಪೇರಂಟ್ಸ್ ಮೀಟಿಂಗ್‌ನಲ್ಲಿ ರಕ್ಷಕರು ಮದ್ರಸದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಮ್ಮ ಮಕ್ಕಳ ದೀನೀ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಮದ್ರಸದ ಸದ್ರ್ ಮುದರ್ರಿಸ್ ಅಬೂಬಿಲಾಲ್ ಎಸ್.ಎಂ. ಕರೆ ನೀಡಿದರು.

ದಾರುಲ್ ಐಮನ್ ವಿದ್ಯಾ ಸಂಸ್ಥೆಯ ಉಪನ್ಯಾಸಕಿ ಹಫೀಝ ಸ್ವಲಾಹಿಯ್ಯ ಮತ್ತು ಪ್ರಾಂಶುಪಾಲ ಉಮ್ಮು ಮುನರು ಹಿತವಚನಗಳನ್ನು ನೀಡಿದರು. ಪ್ರತಿಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ಹಾಗೂ 2015-2016ನೆ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ, ಏಳನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ದ್ವಿತಿಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮದ್ರಸದ ಕಡೆಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್ಕೆಎಸ್ಸೆಂ ಚೊಕ್ಕಬೆಟ್ಟು ಘಟಕದ ಅಧ್ಯಕ್ಷ ಫಯಾಝ್ ಚೊಕ್ಕಬೆಟ್ಟು, ಉಪಾಧ್ಯಕ್ಷ ಮುಹಮ್ಮದ್ ರಫೀಕ್, ಕೋಶಾಧಿಕಾರಿ ಅಬ್ದುಲ್ ಜಲೀಲ್, ಜತೆ ಕಾರ್ಯದರ್ಶಿ ಅಬ್ದುರ್ರಹೀಮ್, ಹಿರಿಯ ಸದಸ್ಯರಾದ ಮೆಹಬೂಬ್, ಟಿ.ಹುಸೈನ್, ಸಲಫಿ ಎಜುಕೇಶನ್ ಬೋರ್ಡ್‌ನ ಅಧ್ಯಕ್ಷ ಮೌಲವಿ ಮುಸ್ತಫಾ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು. ಅಬೂಬಿಲಾಲ್ ಎಸ್.ಎಂ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಆಯಿಶಾ ನಯೀಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News