×
Ad

ಗೃಹರಕ್ಷಕರಿಗೆ ತರಬೇತಿ ಶಿಬಿರ

Update: 2016-10-14 23:47 IST

ಉಡುಪಿ, ಅ.14: ಉಡುಪಿ ಜಿಲ್ಲಾ ಗೃಹರಕ್ಷಕದಳದಲ್ಲಿ 2016-17u3240?ೆ ಸಾಲಿಗೆ ನೋಂದಾಯಿಸಲ್ಪಟ್ಟ ಗೃಹರಕ್ಷಕರಿಗೆ ಅ.17ರಿಂದ 26u3248?ವರೆಗೆ ಜಿಲ್ಲಾ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.
10 ದಿನಗಳ ಕಾಲ ನಡೆಯುವ ತರಬೇತಿ ಶಿಬಿರದಲ್ಲಿ ಗೃಹರಕ್ಷಕರಿಗೆ ರೈಫಲ್ ತರಬೇತಿ ಮತ್ತು ಸ್ಕ್ವಾಡ್ರಿಲ್, ಸಂಚಾರ ನಿಯಂತ್ರಣ ತರಬೇತಿ, ಲಘು ರಕ್ಷಣೆ, ನಿಸ್ತಂತು ಚಾಲನಾ ತರಬೇತಿ, ಪ್ರಥಮ ಚಿಕಿತ್ಸಾ ತರಬೇತಿಗಳನ್ನು ಉಚಿತವಾಗಿ ನೀಡಲಾಗುವುದು.
ಅ.17ರಂದು ತರಬೇತಿ ಶಿಬಿರದ ಉದ್ಘಾಟನೆ ಹಾಗೂ 26u3248?ಂದು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News