ಸರಕಾರ, ಪಕ್ಷದ ಯಶಸ್ಸಿಗೆ ಕಳಂಕ ತಟ್ಟಬಾರದೆಂದು ರಾಜಿನಾಮೆ ನೀಡಿದೆ:ಇ.ಪಿ. ಜಯರಾಜನ್

Update: 2016-10-15 07:55 GMT

ತಿರುವನಂತಪುರಂ,ಅಕ್ಟೋಬರ್ 15: ಪಕ್ಷಮತ್ತು ಸರಕಾರದ ಯಶಸ್ಸಿಗೆ ಯಾವುದೇ ರೀತಿಯ ಕಳಂಕ ತಟ್ಟಬಾರದು ಎಂದು ತಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದೆ ಎಂದು ಇಪಿ ಜಯರಾಜನ್ ಫೇಸ್‌ಬುಕ್‌ನಲ್ಲಿ ಪೋಸ್ಟ್‌ಹಾಕಿ ತನ್ನ ನಿಲುವನ್ನು ವಿವರಿಸಿದ್ದಾರೆ.

ಇಂಡಸ್ಟ್ರಿಯಲ್ ಸಚಿವ ಎಂಬನೆಲೆಯಲ್ಲಿ ಕೇರಳದ ಇಂಡಸ್ಟ್ರಿ ಪ್ರಗತಿ ಮತ್ತು ಬೆಳವಣಿಗೆಯನ್ನು ಉದ್ದೇಶವಾಗಿಟ್ಟು ಕಳೆದ ನಾಲ್ಕೂವರೆತಿಂಗಳಲ್ಲಿ ಕೆಲಸಮಾಡಿದ್ದೇನೆ. ತನ್ನ ಕೆಲಸಗಳು ಭ್ರಷ್ಟಾಚಾರಿಗಳು ಮತ್ತು ಮಾಫಿಯಗಳನ್ನು ಅಸ್ವಸ್ಥಗೊಳಿಸಿತ್ತು ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

ಫೇಸ್‌ಬುಕ್ ಪೋಸ್ಟ್‌ನ ಪೂರ್ಣ ರೂಪ:

ಕೈಗಾರಿಕೆ ಖಾತೆಯ ಸಚಿವನೆಂಬ ನೆಲೆಯಲ್ಲಿ ಕಳೆದ ನಾಲ್ಕೂವರೆ ತಿಂಗಳ ಸಚಿವಸ್ಥಾನದ ಅವಧಿಯಲ್ಲಿ ಕೇರಳದ ಕೈಗಾರಿಕೆಗಳ ಬೆಳವಣಿಗೆ ಮತ್ತು ಪ್ರಗತಿಯನ್ನು ಉದ್ದೇಶವಾಗಿಟ್ಟು ಕೆಲಸಮಾಡಿದ್ದೇನೆ. ಕೇರಳದ ಕೈಗಾರಿಕಾ ಕ್ಷೇತ್ರವನ್ನು ನಿಯಂತ್ರಣದಲ್ಲಿರಿಸಿಕೊಂಡು ನಾಶಪಡಿಸುವ ಕೆಲವು ಶಕ್ತಿಗಳಿಗೂ ಮಾಫಿಯಾಗಳಿಗೂ ನನ್ನ ಚಟುವಟಿಕೆಗಳೂ ಅಸ್ವಾಸ್ಥ್ಯವನ್ನುಂಟು ಮಾಡಿದ್ದವು.

ಕೈಗಾರಿಕಾ ಖಾತೆಯ ಪ್ರಧಾನ ಸ್ಥಾನಗಳಲ್ಲಿ ಕೂತು ಭ್ರಷ್ಟಾಚಾರವೆಸಗಿದ ಅನೇಕ ಮಂದಿಯನ್ನು ಬದಲಾಯಿಸಲು, ತೆಗೆದು ಹಾಕಲು ತಾನುಕೈಗೊಂಡ ತೀರ್ಮಾನದಿಂದಾಗಿ ಅಂತಹವರು ಬಹಳ ಕಷ್ಟವನ್ನು ಎದುರಿಸಬೇಕಾಯಿತು.

ಇಂತಹ ಒಂದು ಪರಿಸ್ಥಿತಿ ನೆಲೆಸಿದ್ದಾಗ ಹೊಸ ವಿವಾದವೊಂದು ಹುಟ್ಟಿಕೊಂಡಿತು. ಈ ವಿವಾದವನ್ನು ಎತ್ತಿ ತೋರಿಸಿದ ರಾಜಕೀಯ ಶತ್ರುಗಳು, ಭ್ರಷ್ಟಾಚಾರಿಗಳು ಸಿಪಿಐಎಂ ಮತ್ತು ಎಲ್‌ಡಿಎಫ್ ಸರಕಾರದ ವಿರುದ್ಧ ದಾಳಿಗಿಳಿದಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಎಲ್‌ಡಿಎಫ್ ಸರಕಾರ ಮತ್ತು ನನ್ನ ಪಕ್ಷದ ಯಶಸ್ಸಿಗೆ ಕಳಂಕ ಬರದಿರುವಂತಾಗಲು ಮತ್ತು ನನ್ನ ತತ್ವಾಧಾರಿತ ನಿಲುವನ್ನು ಜನರಿಗೆ ತಿಳಿಸಿಕೊಡಲು ಇದು ಒಂದು ಅವಕಾಶವೆಂದು ಲೆಕ್ಕಹಾಕಿ ನಾನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ಇಂಗಿತವನ್ನು ಪಕ್ಷಕ್ಕೆ ತಿಳಿಸಿದ್ದೇನೆ. ಪಕ್ಷ ರಾಜಿನಾಮೆಗೆ ಅನುಮತಿ ನೀಡಿತು.

ಈಗಾಗಲೇ ನನ್ನ ರಾಜಿನಾಮೆ ಪತ್ರವನ್ನು ಗೌರವಾನ್ವಿತ ಮುಖ್ಯಮಂತ್ರಿಯವರಿಗೆ ಕೊಟ್ಟಿದ್ದೇನೆ. ಕೈಗಾರಿಕಾಸಚಿವ ಎಂಬ ನೆಲೆಯಲ್ಲಿ ನನ್ನ ಕೆಲಸಗಳಿಗೆ ಬೆಂಬಲ ಸಹಕಾರ ನೀಡಿದ ಎಲ್ಲ ವಿಭಾಗದ ಜನರಿಗೆ ಕೃತಜ್ಞತೆಯನ್ನು ಹೇಳುತ್ತಿದ್ದೇನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News