ಬ್ರಿಕ್ಸ್ ಸಮ್ಮೇಳನ:16 ಪ್ರಮುಖ ಒಪ್ಪಂದಗಳಿಗೆ ಭಾರತ-ರಶ್ಯ ಸಹಿ
ಪಣಜಿ, ಅ.15: ಗೋವಾದ ರಾಜಧಾನಿ ಪಣಜಿಯ ಕಡಲ ಕಿನಾರೆಯಲ್ಲಿರುವ ಲೀಲಾ ಹೋಟೆಲ್‍ನಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ಬ್ರಿಕ್ಸ್ ಸಮ್ಮೇಳನ ದಲ್ಲಿ ಭಾರತ ಮತ್ತು ರಶ್ಯ ಹದಿನಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ,ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನೇತೃತ್ವದಲ್ಲಿ ಶಿಕ್ಷಣ, ರಕ್ಷಣೆ, ರೈಲ್ವೆ ಸೇರಿದಂತೆ 39 ಸಾವಿರ ಕೋಟಿ ರೂ. ವೆಚ್ಚದ ಒಪ್ಪಂದಗಳಿಗೆ ಸಹಿಹಾಕಲಾಗಿದೆ.
ಬಳಿಕ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉಭಯ ದೇಶಗಳ ನಡುವೆ ಆಗರುವ ಒಪ್ಪಂದದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಹಿತಿ ನೀಡಿದರು. "ಭಾರತ ಮತ್ತು ರಶ್ಯ ಸಂಬಂಧ ಹಳೆಯದ್ದು, ಓರ್ವ ಹಳೆಯ ಸ್ನೇಹಿತ ಹೊಸ ಸ್ನೇಹಿತನಿಗಿಂತ ಉತ್ತಮ" ಎಂದು ಮೋದಿ ಹೇಳಿದರು. ಭಯೋತ್ಪಾದನೆ ವಿರುದ್ಧ ಭಾರತ ಕೈಗೊಂಡಿರುವ ಹೋರಾಟಕ್ಕೆ ರಶ್ಯದ ಬೆಂಬಲವಿದೆ ಎಂದು ಮೋದಿ ಹೇಳಿದರು.
ಕೂಡಕುಳಂನ ಎರಡನೆ ವಿದ್ಯುತ್ ಘಟಕ ಸ್ಥಾಪನೆಗೆ ಗೋವಾದಿಂದಲೇ ಮೋದಿ ಹಾಗೂ ಪುಟಿನ್ ಶಂಕುಸ್ಥಾಪನೆ ನೆರವೇರಿಸಿದರು.
. .