ಪತ್ನಿ ತನ್ನ ಅಡಿಗೆ ಮನೆಯವಳು: ನೈಜೀರಿಯ ಅಧ್ಯಕ್ಷ
ಅಬೂಜ, ಅಕ್ಟೋಬರ್ 15: ಸರಿಯಾಗಿ ಆಡಳಿತ ನಡೆಸಬೇಕು ಇಲ್ಲದಿದ್ದರೆ ತನ್ನ ಬೆಂಬಲವಿರುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದ ಪತ್ನಿಯ ವಿರುದ್ಧ ನೈಜೀರಿಯ ಅಧ್ಯಕ್ಷರು ಮಾತಿನ ಚಾಟಿ ಬೀಸಿದ್ದಾರೆ. ತನ್ನ ಪತ್ನಿಗೆ ಅಡಿಗೆಕೋಣೆಗಳ ಬಗ್ಗೆ ಮಾತ್ರವೇ ತಿಳಿದಿದೆ. ನನ್ನ ಪತ್ನಿಯಾವ ಪಾರ್ಟಿಯಲ್ಲಿದ್ದಾರೆಂದು ಗೊತ್ತಿಲ್ಲ. ಆದರೆ ಅವರು ನನ್ನ ಅಡಿಗೆಕೋಣೆ, ಸ್ವಾಗತಕೊಠಡಿಮತ್ತು ಇನ್ನೊಂದು ಕೋಣೆ ಮಾತ್ರ ಅವರ ಜಗತ್ತು ಆಗಿದೆ ಎಂದು ನೈಜೀರಿಯನ್ ಅಧ್ಯಕ್ಷ ಮುಹಮ್ಮದ್ ಬುಹಾರಿ ಪತ್ನಿಗೆ ತಿರುಗೇಟು ನೀಡಿದ್ದಾರೆಂದು ವರದಿಯಾಗಿದೆ.ಜರ್ಮನಿಯ ಚಾನ್ಸಲರ್ ಆಂಜೆಲಾ ಮಾರ್ಕೆಲ್‌ರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಬುಹಾರಿ ಇಂತಹದೊಂದು ಪರಾಮರ್ಶೆ ನಡೆಸಿದ್ದಾರೆ. ಬುಹಾರಿಯ ಉತ್ತರವನ್ನು ಜರ್ಮನಿಭಾಷೆಯಲ್ಲಿ ವಿವರಿಸಿದ ದುಭಾಷಿಯ ಮಾತು ಕೇಳಿ ಆಂಜೆಲಾ ಮಾರ್ಕೆಲ್ ಮುಗುಳ್ನಕ್ಕಿದ್ದಾರೆ.
ಪ್ರತಿಪಕ್ಷನ್ನು ತೃಪ್ತಿಪಡಿಸಿ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಬುಹಾರಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ನೈಜರಿಯಾದಲ್ಲಿ ಒಂದು ವ್ಯವಸ್ಥೆಯೂ ಸರಿಯಾಗಿಲ್ಲ .ಇದರಲ್ಲಿ ಬದಲಾವಣೆ ಆಗದಿದ್ದರೆ ಮುಂದಿನ ಚುನಾವಣೆಯಲ್ಲಿ ತಮ್ಮ ಪತಿಯ ಜೊತೆಗಿರುವುದಿಲ್ಲ ಎಂದು ಬುಹಾರಿ ಪತ್ನಿ ಐಶಾಬುಹಾರಿ ಬಿಬಿಸಿ ಚ್ಯಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಪತಿಗೆ ಸರಕಾರದ ಕೆಲಸದ ಕುರಿತೊ ಅಥವಾ ಯೋಜನೆಯ ಕುರಿತೋ ಅವರಿಗೆ ಗೊತ್ತಿಲ್ಲ. ಇಂತಹ ಅವಸ್ಥೆ ಮುಂದುವರಿದರೆ ಮುಂದಿನ ಬಾರಿಮಹಿಳೆಯರೊಂದಿಗೆ ಓಟು ಕೇಳಲು, ಚುನಾವಣೆ ಪ್ರಚಾರ ಕಾರ್ಯಕ್ರಮಗಳಿಗೆ ತಾನು ಬರುವುದಿಲ್ಲ ಎಂದು ಐಶಾ ಹೇಳಿದ್ದರು. 1980ರಲ್ಲಿ ಸೇನಾ ಮುಖ್ಯಸ್ಥರಾಗಿದ್ದ ಬುಹಾರಿ ಮೂರುಸಲ ಸೋತ ಬಳಿಕ 2015ರಲ್ಲಿ ನಾಲ್ಕನೆ ಬಾರಿ ಸ್ಪರ್ಧಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಹಿಂದಿನ ರಾಜಕೀಯ ವೈರಿಗಳು ಮತ್ತು ಸಮಯಸಾಧಕರ ಜೊತೆಗೆ ಮೈತ್ರಿಮಾಡಿಕೊಂಡು ಅವರು ಈ ಸಲ ಅಧ್ಯಕ್ಷರ ಸ್ಥಾನದಲ್ಲಿ ಕೂತಿದ್ದಾರೆ. ಆದರೆ ಬುಹಾರಿ ನಡೆಸುತ್ತಿರುವ ಮಹಿಳಾ ವಿರೋಧಿ
ಹೇಳಿಕೆಗಳು ನೈಜೀರಿಯದ ಸೋಶಿಯಲ್ ಮೀಡಿಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಬುಹಾರಿಯನ್ನು ಡೊನಾಲ್ಡ್ ಟ್ರಂಪ್‌ಗೆ ಹೋಲಿಸುವ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ತುಂಬಿಕೊಂಡಿವೆ ಎಂದು ವರದಿ ತಿಳಿಸಿದೆ.