ಪೇಜಾವರ ಮಠದ ವೆಬ್‌ಸೈಟ್ ಹ್ಯಾಕ್

Update: 2016-10-15 15:38 GMT

ಉಡುಪಿ, ಅ.15: ಪರ್ಯಾಯ ಪೇಜಾವರ ಮಠದ ವೆಬ್‌ಸೈಟ್‌ನ್ನು ಪಾಕಿಸ್ತಾನದ ಹ್ಯಾಕರ್ಸ್‌ಗಳು ಹ್ಯಾಕ್ ಮಾಡಿರುವ ಬಗ್ಗೆ ವರದಿಯಾಗಿದೆ.

ಎರಡು ದಿನಗಳ ಹಿಂದೆ ಮಠದ ಅಧಿಕೃತ ವೆಬ್‌ಸೈಟ್(www.pejavaraparyaya2016.org)ನಲ್ಲಿ ‘ಹ್ಯಾಕ್ಡ್ ಬೈ ಪಾಕ್ ಸೈಬರ್ ಪ್ರೊಫೆಶನಲ್ಸ್’ ಎಂಬ ಸಂದೇಶ ಬರುತ್ತಿರುವುದಾಗಿ ಮಠದವರು ಅ.12 ರಂದು ಉಡುಪಿ ನಗರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಉಡುಪಿ ನಗರ ಪೊಲೀಸರು ಬೆಂಗಳೂರಿನ ಸೈಬರ್ ಕ್ರೈಮ್ ವಿಭಾಗಕ್ಕೆ ರವಾನಿಸಿದ್ದಾರೆ.

ಇದೀಗ ವೆಬ್‌ಸೈಟ್ ಹ್ಯಾಕ್‌ನ್ನು ತೆರವುಗೊಳಿಸಲಾಗಿದ್ದು, ವೆಬ್‌ಸೈಟ್ ಎಂದಿನಂತೆ ಕಾರ್ಯಾಚರಿಸುತ್ತಿದೆ. ಈ ವೆಬ್‌ಸೈಟ್‌ನಲ್ಲಿ ಉಡುಪಿ ಶ್ರೀಕೃಷ್ಣ ಮಠ ಹಾಗೂ ಪೇಜಾವರ ಮಠದ ಕಾರ್ಯಕ್ರಮಗಳ ವಿವರ, ಫೋಟೋ ಹಾಗೂ ವೀಡಿಯೊಗಳನ್ನು ಅಪ್‌ಲೋಡ್ ಮಾಡಲಾಗುತ್ತಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News