×
Ad

ಹೊರ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

Update: 2016-10-15 23:43 IST

ಮಂಗಳೂರು, ಅ.15: ಹೊರ ಗುತ್ತಿಗೆ ಆಧಾರದಲ್ಲಿ ಜೆಟ್ ಏರ್‌ವೇಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಓರ್ವ ಸಿಬ್ಬಂದಿಗೆ ಪಾಸ್ ವಿಷಯಕ್ಕೆ ಸಂಬಂಧಿಸಿ ಸೆಕ್ಯೂರಿಟಿ ಗಾರ್ಡ್‌ವೊಬ್ಬರು ಕಿರುಕುಳ ನೀಡಿದ್ದಾರೆಂದು ಆರೋಪಿಸಿ 50ಕ್ಕೂ ಅಧಿಕ ಸಿಬ್ಬಂದಿ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಭಾರತೀಯ ಕಾಮ್‌ಗಾರ್ ಸೇನೆ ಮತ್ತು ಅಖಿಲ ಭಾರತ ಹಿಂದೂ ಮಹಾಸಭಾ ವತಿಯಿಂದ ಸಿಬ್ಬಂದಿ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಸುಮಾರು 60 ಮಂದಿ ಸಿಬ್ಬಂದಿ ವಿಮಾನ ನಿಲ್ದಾಣದ ಜೆಟ್ ಏರ್‌ವೇಸ್‌ನಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಪೈಕಿ ಅದ್ಯಪಾಡಿ ನಿವಾಸಿ ರಕ್ಷಿತ್ ಎಂಬಾತ ಏರ್‌ಪೋರ್ಟ್ ಪ್ರವೇಶದ ಪಾಸ್ ಹೊಂದಿದ್ದರೂ ನಿಲ್ದಾಣದ ಸೆಕ್ಯೂರಿಟಿ ಗಾರ್ಡ್ ಒಳಪ್ರವೇಶಲು ಬಿಡದೆ ನಿಂದಿಸಿದ್ದಾರೆ ಎಂದು ಇನ್ನೋರ್ವ ಸಿಬ್ಬಂದಿ ಕರಂಬಾರ್ ನಿವಾಸಿ ರಕ್ಷಿತ್ ಆರೋಪಿಸಿದ್ದಾರೆ.
ಅಲ್ಲದೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸನಿರ್ವಹಿಸುತ್ತಿರುವ ಗುತ್ತಿಗೆದಾರರಿಂದಲೂ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದವರು ಆರೋಪ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News