×
Ad

ಕರಾಟೆ ಸ್ಪರ್ಧಾರ್ಥಿಗೆ ಬೀಳ್ಕೊಡುಗೆ

Update: 2016-10-15 23:45 IST

ಉಳ್ಳಾಲ, ಅ.15: ಇತ್ತೀಚೆಗೆ ಕ್ಯಾಲಿಕಟ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಯಿಸಿ ಮೆಕ್ಸಿಕೋದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದ ಎಸ್ಸೆಸ್ಸೆಫ್ ಉಳ್ಳಾಲ ಪೇಟೆ ಶಾಖೆಯ ಕಾರ್ಯಕರ್ತ ಫಾಝಿಲ್‌ರಿಗೆ ಎಸ್ಸೆಸ್ಸೆಫ್ ಉಳ್ಳಾಲ ಕ್ಯಾಂಪಸ್ ವತಿಯಿಂದ ಹಳೆಕೋಟೆ ಸ್ಟೂಡೆಂಟ್ಸ್ ಹೌಸ್‌ನಲ್ಲಿ ಬೀಳ್ಕೊಡಲಾಯಿತು.
ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ನವಾಝ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು. ಮುನೀರ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಲ್ಯಾಸ್ ಕೈಕೋ, ತ್ವಾಹೀರ್ ಹಾಜಿ, ಮನ್ಸೂರ್ ಹಳೆಕೋಟೆ, ಶಬೀರ್ ಪೇಟೆ, ತೌಸೀಫ್ ಒಂಭತ್ತುಕೆರೆ, ಅಹ್ಸನ್, ಹಫೀಝ್ ಕೋಡಿ, ನೌಫಾಲ್ ಕೋಟೆಪುರ, ಮುಝಮ್ಮಿಲ್ ಉಸ್ತಾದ್ ಉಪಸ್ಥಿತರಿದ್ದರು.
ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News