ಮುಳುಗುತ್ತಿದ್ದ ‘ಸ್ನೇಹಿತ’ನನ್ನು ರಕ್ಷಿಸಲು ಧಾವಿಸಿದ ಮರಿಯಾನೆ
Update: 2016-10-17 19:00 IST
ಉತ್ತರ ಥಾಯ್ಲೆಂಡ್‌ನ ಎಲಿಫ್ಯಾಂಟ್ ನೇಚರ್ ಪಾರ್ಕ್‌ನಲ್ಲಿ, ತನ್ನ ತರಬೇತುದಾರ ನೀರಿನಲ್ಲಿ ಮುಳುಗುತ್ತಿದ್ದಾನೆ ಎಂಬುದಾಗಿ ಭಾವಿಸಿದ ಮರಿಯಾನೆಯೊಂದು ಆತನನ್ನು ರಕ್ಷಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದ ವೀಡಿಯೊ ಇದು. ವಾಸ್ತವವಾಗಿ ಮಾವುತ ಡ್ಯಾರಿಕ್ ಕೊಳದಲ್ಲಿ ಈಜುತ್ತಿದ್ದರು. ಒಂದು ಹಂತದಲ್ಲಿ, ತನ್ನ ಮಾವುತ ಆಪತ್ತಿನಲ್ಲಿದ್ದಾನೆ ಎಂಬುದಾಗಿ ಭಾವಿಸಿದ ಮರಿಯಾನೆ ‘ಖಾಮ್ ಲಹಾ’ ತಕ್ಷಣ ತನ್ನ ಮಾನವ ಸ್ನೇಹಿತನ ರಕ್ಷಣೆಗೆ ಧಾವಿಸಿದೆ. ಪ್ರಾಣಿಗಳು ಮಾನವರೊಂದಿಗೆ ಆತ್ಮೀಯ ಬಾಂಧವ್ಯವನ್ನು ಹೊಂದಿರುತ್ತವೆ ಎನ್ನುವುದನ್ನು ತೋರಿಸುವ ಅತ್ಯುತ್ತಮ ವೀಡಿಯೊ ಇದು.