×
Ad

ಗುಜರಾತ್ ಹಿಂಸಾಚಾರ ಆರೋಪಿ ಬ್ರಿಟನ್‌ನಿಂದ ಗಡಿಪಾರು

Update: 2016-10-18 19:54 IST

ಲಂಡನ್, ಅ.18: ಗುಜರಾತ್ ಹಿಂಸಾಚಾರ ಪ್ರಕರಣದಲ್ಲಿ ಬೇಕಾಗಿರುವ 40ರ ಹರೆಯದ ವ್ಯಕ್ತಿಯೊಬ್ಬನನ್ನು ಭಾರತದಲ್ಲಿ ವಿಚಾರಣೆ ಎದುರಿಸುವುದಕ್ಕಾಗಿ ಬ್ರಿಟನ್ ಇಂದು ಗಡಿಪಾರು ಮಾಡಿದೆ. 24 ವರ್ಷಗಳ ಹಿಂದೆ ಉಭಯ ದೇಶಗಳು ಗಡಿಪಾರು ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಬ್ರಿಟನ್‌ನಿಂದ ಗಡಿಪಾರಾಗಿರುವ ಮೊದಲ ವ್ಯಕ್ತಿ ಆತನಾಗಿದ್ದಾನೆ.

ಭಾರತದ ಅಧಿಕಾರಿಗಳು ಹೊರಡಿಸಿದ್ದ ರೆಡ್‌ಕಾರ್ನರ್ ನೋಟಿಸ್‌ನನ್ವಯ ಸ್ಕಾಟ್ಲೆಂಡ್‌ಯಾರ್ಡ್, ಆಗಸ್ಟ್‌ನಲ್ಲಿ ಪಶ್ಚಿಮ ಲಂಡನ್‌ನಿಂದ ಸಮೀರ್‌ಭಾಯಿ ವಿನುಭಾಯಿ ಪಟೇಲ್ ಎಂಬ ಈ ವ್ಯಕ್ತಿಯನ್ನು ಬಂಧಿಸಿತ್ತು.

ಆತನ ಗಡಿಪಾರು ಆದೇಶಕ್ಕೆ ಬ್ರಿಟನ್‌ನ ಗೃಹ ಕಾರ್ಯದರ್ಶಿ ಅಂಬರ್ ರಡ್ ಸೆ.22ರಂದು ಸಹಿ ಹಾಕಿದ್ದರು. ಪಟೇಲ್‌ನನ್ನು ಭಾರತಕ್ಕೆ ಕಳುಹಿಸಲು ‘ಶರಣಾಗತಿ ವ್ಯವಸ್ಥೆಯನ್ನು ಅಂತಿಮಗೊಳಿಸಲಾಗಿತ್ತು.

ಭಾರತದ ಮನವಿಯಂತೆ ಭಾರತದ ನಾಗರಿಕ ಸಮೀರ್‌ಭಾಯಿ ವಿನುಭಾಯಿ ಪಟೇಲ್ ಎಂಬಾತನನ್ನು ಭಾರತದಲ್ಲಿ ವಿಚಾರಣೆ ಎದುರಿಸುವುದಕ್ಕಾಗಿ 2016ರ ಅ.18ರಂದು ಗಡಿಪಾರು ಮಾಡಲಾಗುವುದು ಎಂದು ಬ್ರಿಟಿಷ್ ದೂತಾವಾಸವು ಇಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಭಾರತ-ಬ್ರಿಟನ್‌ಗಳು 1992ರಲ್ಲಿ ಗಡಿಪಾರು ಒಪ್ಪಂದಕ್ಕೆ ಸಹಿ ಹಾಕಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News