×
Ad

ತಲಪಾಡಿ ಟೋಲ್‌ಗೇಟ್‌ನಲ್ಲಿ ಸೌಲಭ್ಯ ಒದಗಿಸುವಂತೆ ಮನವಿ

Update: 2016-10-18 21:52 IST

ಉಳ್ಳಾಲ, ಅ.18: ತಲಪಾಡಿಯಲ್ಲಿ ನಿರ್ಮಾಣವಾಗಿರುವ ಟೋಲ್‌ಗೇಟ್‌ನಲ್ಲಿ ಸ್ಥಳೀಯ ಪ್ರಯಾಣಿಗಳಿಗೆ ರಿಯಾಯಿತಿ ಮತ್ತು ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಸೋಮೇಶ್ವರ ಉಚ್ಚಿಲದ ನಾಗರಿಕ ಸಮಿತಿ ಯುವವೇದಿಕೆಯು ನವಯುಗ ಕನ್‌ಸ್ಟ್ರಕ್ಷನ್ಸ್ ಕಂಪೆನಿಯ ಯೋಜನಾಧಿಕಾರಿಗಳಿಗೆ ಮನವಿ ನೀಡಿತು.

1. ಸ್ಥಳೀಯ ಕೆಎ-19 ನೋಂದಣಿಯ ವಾಹನಗಳಿಗೆ ಸಂಪೂರ್ಣ ರಿಯಾಯಿತಿ.

2.ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ.

3.ಸುಸಜ್ಜಿತ ಶೌಚಾಲಯದ ವ್ಯವಸ್ಥೆ.

4 ಟೋಲ್ಗೇಟಲ್ಲಿ ಕಾರ್ಯ ನಿರ್ವಹಿಸಲು ಸ್ಥಳೀಯರಿಗೆ ಅವಕಾಶ ನೀಡಬೇಕು.

5 ಚತುಷ್ಪಥ ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಾಹನ ಸವಾರರಿಗೆ ಮುಂಜಾಗ್ರತೆಯ ಬಗೆಗಿನ ಸೂಚನಾ ಫಲಕಗಳನ್ನು ಟೋಲ್‌ಗೇಟ್ ಹತ್ತಿರ ಅಳವಡಿಸತಕ್ಕದ್ದು.

6 ಅಪಘಾತ ಸಂಭವಿಸಿದಾಗ ತುರ್ತು ಸೇವೆಗಾಗಿ ಟೋಲ್ ಹತ್ತಿರವೇ ಆಂಬುಲೆನ್ಸ್ ನಿಲುಗಡೆ ಕೇಂದ್ರ ಸ್ಥಾಪಿಸಬೇಕು.

7 ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಕಸದ ಬುಟ್ಟಿಗಳನ್ನು ಇರಿಸಬೇಕೆಂಬ 7 ಬೇಡಿಕೆಗಳನ್ನು ಮುಂದಿಟ್ಟು ನವಯುಗ ಗುತ್ತಿಗೆ ಕಂಪೆನಿಯ ಯೋಜನಾಧಿಕಾರಿ ಭಾನುಪ್ರಕಾಶ್‌ರಿಗೆ ಮನವಿ ಸಲ್ಲಿಸಲಾಯಿತು.

ನಾಗರಿಕ ಸಮಿತಿ ಯುವ ವೇದಿಕೆ ಅಧ್ಯಕ್ಷ ಪ್ರಮೋದ್ ಉಚ್ಚಿಲ್, ಪದಾಧಿಕಾರಿಗಳಾದ ರಂಜಿತ್ ಉಚ್ಚಿಲ್,ಅವಿನಾಶ್ ಉಚ್ಚಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News