×
Ad

ನೀರುಮಾರ್ಗ: ತಂಡದಿಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ

Update: 2016-10-18 23:01 IST

ಮಂಗಳೂರು, ಅ. 18: ನಗರದ ಹೊರವಲಯದ ನೀರುಮಾರ್ಗದಲ್ಲಿ ಕ್ಷುಲ್ಲಕ ಕಾರಣದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಐವರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರು ಪೊಲೀಸರು ಬಂಧಿಸಿದ್ದಾರೆ.

ಕಿಶೋರ್ (25), ಪ್ರಜ್ವಿತ್ (26), ನಿತಿನ್ ಪೂಜಾರಿ (25), ರವೀಂದ್ರ ವಿಕ್ರಮ್ (24), ನಿತೀಶ್ ಶೆಟ್ಟಿ (27) ಬಂಧಿತ ಆರೋಪಿಗಳಾಗಿದ್ದಾರೆ.

 ಅ.14ರಂದು ಮನೋಜ್ ಎಂಬವರು ಟವೆರಾ ಗಾಡಿಯಲ್ಲಿ ಸಂಜೆ 7 ಗಂಟೆಗೆ ನೀರುಮಾರ್ಗದ ಬಾರ್‌ವೊಂದಕ್ಕೆ ಹೋಗಿದ್ದಾಗ, ಅವರ ಪರಿಚಯದವರಾದ ಆರೋಪಿಗಳು 3ರಿಂದ 4ಮಂದಿ ಇತರರೊಂದಿಗೆ ಬಂದು ಮನೋಜ್ ಅವರ ತಲೆಗೆ ಕಡಿಯಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಮನೋಜ್ ಜೊತೆಗಿದ್ದ ಜಯಪ್ರಕಾಶ್ ತಡೆಯಲು ಪ್ರಯತ್ನಿಸಿದ್ದು, ಕಿಶೋರ್ ಎಂಬಾತ ತಲವಾರನ್ನು ಬೀಸಿದಾಗ ಪಕ್ಕದಲ್ಲಿದ್ದ ಪ್ಲಾಸ್ಟಿಕ್ ಚೇರ್ ತುಂಡಾಗಿ ಮನೋಜ್ ಅವರಿಗೆ ಗಾಯವಾಗಿದೆ. ಜಯಪ್ರಕಾಶ್‌ಗೂ ತಂಡ ಸೋಡಾ ಬಾಟ್ಲಿಯಿಂದ ಹಲ್ಲೆ ಮಾಡಿದ್ದಲ್ಲದೆ, ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News