×
Ad

ಮೂರು ರಿಕ್ರೇಶನ್ ಕ್ಲಬ್‌ಗಳಿಗೆ ದಾಳಿ: 40 ಮಂದಿಯ ಬಂಧನ

Update: 2016-10-18 23:27 IST

ಮಂಗಳೂರು, ಅ.18: ಕಾನೂನು ಬಾಹಿರವಾಗಿ ವಿಡಿಯೋ ಗೇಮ್ ಆಡುತ್ತಿದ್ದ ಕೂಳೂರಿನ ಹಾಗೂ ಕಾವೂರಿನ 3 ರಿಕ್ರೇಶನ್ ಕ್ಲಬ್‌ಗಳಿಗೆ ದಾಳಿ ನಡೆಸಿದ ಕಾವೂರು ಪೊಲೀಸರು 40 ಮಂದಿಯನ್ನು ಬಂಧಿಸಿದ್ದಾರೆ.

ವೀಡಿಯೋ ಗೇಮ್‌ಗೆ ಬಳಸುತ್ತಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೂಳೂರಿನ ರಿಕ್ರೇಶನ್ ಕ್ಲಬ್‌ಗೆ ದಾಳಿ ಮಾಡಿ ಆರೋಪಿಗಳಾದ ಉಮರ್, ಮುಹಮ್ಮದ್ ಆಸಿಫ್, ಅಬ್ದುಲ್ ಖಾದರ್ ಹಾಗೂ ಹರೀಶ್ ಶೆಟ್ಟಿಯನ್ನು ಬಂಧಿಸಲಾಗಿದೆ.

ಕಾವೂರಿನ ರಿಕ್ರೇಶನ್ ಕ್ಲಬ್‌ನಿಂದ ನವೀನ್, ಲೋಕಯ್ಯ, ಅಂತೋನಿ, ಕೆವಿನ್ ಫೆರ್ನಾಂಡೀಸ್, ಮಾಧವ, ದಿನೇಶ್, ಶ್ರೀನಿವಾಸ, ಶಂಕರ, ನೀಲ್ ಡಿಸೋಜ, ಆದರ್ಶ್ ಮತ್ತು ಕಾವೂರಿನ ಇನ್ನೊಂದು ರಿಕ್ರೇಶನ್ ಕ್ಲಬ್‌ಗೆ ದಾಳಿ ಮಾಡಿ ಪ್ರಶಾಂತ್, ರಶೀದ್, ರಕ್ಷಿತ್, ಫಾರೂಕ್, ಅನ್ಸಾರ್, ನಾಗರಾಜ್, ಮುಹಮ್ಮದ್ ಅಸ್ಬಾಕ್, ದಾವೂದ್, ರಮೇಶ್, ರಾಹುಲ್, ಕೇಶವ, ಶರೀಫ್, ರಿಯಾಝ್, ಮುಹಮ್ಮದ್ ಸೈುಲ್ಲಾ, ಸುಧೀರ್, ಉಮೇಶ್, ರಾಕೇಶ್ ಶೆಟ್ಟಿ, ರಮೇಶ್, ಹರೀಶ, ರಿಫಾಝ್, ಅಬ್ದುಲ್ ಖಾದರ್, ಶಿವಾನಂದ, ದಯಾನಂದ, ಕಿಶೋರ್, ಲಕ್ಷ್ಮಣ್, ರವೀಂದ್ರ ಎಂಬವರನ್ನು ಬಂಧಿಸಲಾಗಿದೆ.

ಕಾವೂರು ಠಾಣಾ ನಿರೀಕ್ಷಕ ನಟರಾಜ್ ನೇತೃತ್ವದಲ್ಲಿ ಈ ದಾಳಿಯನ್ನು ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News