ಚಿಕಿತ್ಸೆಗಾಗಿ ಹಣ ಪಡೆದು ವಂಚನೆ
Update: 2016-10-18 23:29 IST
ಉಡುಪಿ, ಅ.18: ಅನಾರೋಗ್ಯ ಪೀಡಿತ ಮಗುವಿಗೆ ಚಿಕಿತ್ಸೆ ನೀಡುವುದಾಗಿ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದ ವೈದ್ಯ ಆಯುರ್ವೇದ ಚಿಕಿತ್ಸಾಲಯದ ಶ್ರೀಪಾದ ಮತ್ತು ಪುರುಷೋತ್ತಮ ಎಂಬವರು ಮಣಿಪಾಲ ಎಎಲ್‌ಎನ್ ಲೇಔಟ್‌ನ ನಾಗರಾಜ ಎಂಬವರ ಅನಾರೋಗ್ಯ ಪಿಡಿತ ಮಗುವಿಗೆ ಔಷಧಿ ನೀಡುವುದಾಗಿ ಹೇಳಿ ನಾಗರಾಜ ಅವರಿಂದ 2,20,000ರೂ. ಹಣವನ್ನು ಪಡೆದಿದ್ದರು.
ಚಿಕಿತ್ಸಾಲಯದ ವೈದ್ಯ ಡಾ.ಗುರು ವಿ.ಜಿ. ಎಂಬವರಿಂದ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ ಶ್ರೀಪಾದ್ ಮತ್ತು ಪುರುಷೋತ್ತಮ ತಮ್ಮ ವಿಸಿಟಿಂಗ್ ಕಾರ್ಡ್‌ನ್ನು ನಾಗರಾಜ್‌ಗೆ ಕೊಟ್ಟು ನಂತರ ಸಂಪರ್ಕಕ್ಕೆ ಸಿಗದೆ ನಂಬಿಸಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.