×
Ad

ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು: ಡಾ.ಜಗದೀಶ ಶೆಟ್ಟಿ

Update: 2016-10-18 23:53 IST

ಉಡುಪಿ, ಅ.18: ಅಧ್ಯಾಪನ ಮತ್ತು ಅಧ್ಯಯನ ಒಂದಕ್ಕೊಂದು ಪೂರಕ ವಾಗಿದ್ದು, ಉನ್ನತ ಶಿಕ್ಷಣದಲ್ಲಿ ಶಿಕ್ಷಕರು ಅಧ್ಯಾಪನದೊಂದಿಗೆ ಅಧ್ಯಯನ ಮತ್ತು ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಹೆಚ್ಚು ಪ್ರಸ್ತುತವಾಗಿರುತ್ತಾರೆ ಎಂದು ಉಡುಪಿ ಪೂರ್ಣಪ್ರಜ್ಞ್ಞ ಕಾಲೇಜಿನ ಪ್ರಾಂಶು ಪಾಲ ಡಾ.ಜಗದೀಶ್ ಶೆಟ್ಟಿ ಹೇಳಿದ್ದಾರೆ.

ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಮಾನವಿಕ ಸಂಘದ ವತಿಯಿಂದ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿ ದ್ದರು. ಮಂಗಳೂರು ವಿವಿಯಿಂದ ಪಿಎಚ್‌ಡಿ ಪದವಿ ಪಡೆದ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ಡಾ.ವಿನ್ಸೆಂಟ್ ಆಳ್ವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ಜೆರಾಲ್ಡ್ ಪಿಂಟೊ, ಪ್ರಾಧ್ಯಾಪಕರಾದ ಡಾ. ಜಯರಾಂ ಶೆಟ್ಟಿಗಾರ್, ಮೆಲ್ವಿನ್ ಸಿ.ರೇಗೋ, ರೇಶ್ಮಾ ಪೂಜಾ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News