ಉಳ್ಳಾಲದಲ್ಲಿ ‘ಹುಖೂಖುಲ್ ಇಬಾದ್’ ಸ್ನೇಹ ಸಮ್ಮಿಲನ

Update: 2016-10-19 14:31 GMT

ಉಳ್ಳಾಲ, ಅ.19: ಸಯ್ಯದ್ ಮದನಿ ದರ್ಗಾ ಸಮಿತಿ ಉಳ್ಳಾಲ ಮತ್ತು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಜಂಟಿ ಆಶ್ರಯದಲ್ಲಿ ಉಳ್ಳಾಲ ದರ್ಗಾ ಸಮಿತಿ ಆಡಳಿತಕ್ಕೊಳಪಟ್ಟ ಮಸೀದಿಗಳ ಖತೀಬರು, ಮದ್ರಸ ಅದ್ಯಾಪಕರು ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳ ಸ್ನೇಹ ಸಮ್ಮಿಲನವು ಉಳ್ಳಾಲ ದರ್ಗಾ ವಠಾರದ ಮದನಿ ಹಾಲ್‌ನಲ್ಲಿ ಜರಗಿತು.

ಉಳ್ಳಾಲ ಸಯ್ಯದ್ ಮದನಿ ಅರೆಬಿಕ್ ಕಾಲೇಜ್‌ನ ಪ್ರೊಫೆಸರ್ ಅಲ್‌ಹಾಜ್ ಅಹ್ಮದ್ ಬಾವ ಮುಸ್ಲಿಯಾರ್ ದುಆ ನೇರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ವಹಿಸಿದ್ದರು. ಕೃಷ್ಣಾಪುರ ಖಾಝಿ ಅಲ್‌ಹಾಜ್ ಇ.ಕೆ. ಇಬ್ರಾಹೀಂ ಮದನಿ ಹಾಗೂ ಟಿಆರ್‌ಎಫ್ ಸಲಹೆಗಾರ ಹಾಜಿ ರಫೀಕ್ ಮಾಸ್ಟರ್ ‘ಹುಖೂಖುಲ್ ಇಬಾದ್ ಇಸ್ಲಾಂನಲ್ಲಿ ಮನುಕುಲದ ಸೇವೆ’ ಎಂಬ ವಿಷಯದಲ್ಲಿ ತರಗತಿ ನಡೆಸಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಮದನಿ ದರ್ಗಾದ ಉಪಾಧ್ಯಕ್ಷ ಬಾವ ಮುಹಮ್ಮದ್, ಸಯ್ಯದ್ ಮದನಿ ಅರೆಬಿಕ್ ಎಜುಕೇಶನಲ್ ಟ್ರಸ್ಟ್‌ನ ಉಪಾಧ್ಯಕ್ಷ ಹಾಜಿ ಮುಹಮ್ಮದ್, ಮುಫತ್ತಿಸ್ ಸುಲೈಮಾನ್ ಸಖಾಫಿ, ಉಸ್ಮಾನ್ ಜೌಹರಿ ಮತ್ತಿತರರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುರ್ರಶೀದ್‌ರನ್ನು ಟಿಆರ್‌ಎಫ್ ವತಿಯಿಂದ ಸನ್ಮಾನಿಸಲಾಯಿತು. ಉಳ್ಳಾಲ ದರ್ಗಾ ಆಡಳಿತ ಕಮಿಟಿ ಸದಸ್ಯರು, ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್ ಸದಸ್ಯರು, ಸಯ್ಯದ್ ಮದನಿ ಚಾರೀಟೇಬಲ್ ಟ್ರಸ್ಟ್ ಸದಸ್ಯರು, ಮೊಹಲ್ಲ ಸದಸ್ಯರು, ಮಸೀದಿಗಳ ಖತೀಬರು ಮತ್ತು ಮದ್ರಸ ಅಧ್ಯಾಪಕರು ಭಾಗವಹಿಸಿದ್ದರು.

ಟಿಆರ್‌ಎಫ್ ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದ ಸಂಚಾಲಕ ಅಸ್ಪರ್ ಹುಸೈನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News