ಮಂಗಳೂರು ವಿ.ವಿ ಮಟ್ಟದ ಕಬಡ್ಡಿ ಪಂದ್ಯಾಟ: ಆಳ್ವಾಸ್ ಕಾಲೇಜು ಚಾಂಪಿಯನ್

Update: 2016-10-19 15:18 GMT

ಮಂಗಳೂರು, ಅ.19: ಮಂಗಳೂರು ವಿಶ್ವವಿದ್ಯಾಲಯ, ಬೆಸೆಂಟ್ ಸಂಧ್ಯಾ ಕಾಲೇಜು ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ನಗರದ ಉರ್ವ ಮಾರ್ಕೆಟ್ ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಳ್ವಾಸ್  ಕಾಲೇಜು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಸೋಮವಾರ ಮತ್ತು ಮಂಗಳವಾರ ವಲಯಮಟ್ಟದ ಪಂದ್ಯಗಳು ನಡೆದಿದ್ದವು. ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಸ್ಮಾರಕ ಪಾರಿತೋಷಕಕ್ಕಾಗಿ ಬುಧವಾರ ಅಂತಿಮ ಸುತ್ತಿನ ಪಂದ್ಯಗಳು ನಡೆದವು. ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಉಜಿರೆಯ ಎಸ್‌ಡಿಎಂ ಪದವಿ ಕಾಲೇಜು ತಂಡವನ್ನು ಸೋಲಿಸಿ ಆಳ್ವಾಸ್ ಕಾಲೇಜು ತಂಡ ಚಾಂಪಿಯನ್‌ಶಿಪ್ ತನ್ನದಾಗಿಸಿತು. ಆರಂಭದಿಂದ ಅಂತ್ಯದವರೆಗೆ ಮುನ್ನಡೆ ಕಾಯ್ದುಕೊಂಡ ಆಳ್ವಾಸ್ ಕಾಲೇಜು ತಂಡವು ಎಸ್ ಡಿಎಂ ಕಾಲೇಜು ತಂಡವನ್ನು 37-6 ಪಾಯಿಂಟ್ ಗಳ ಅಂತರದಿಂದ ಮಣಿಸಿತು.

ಬೆಳಗ್ಗೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯ ತಂಡವು 32-18 ಪಾಯಿಂಟಗಳ ಅಂತರದಿಂದ ಉಡುಪಿಯ ಪಿ.ಪಿ ಕಾಲೇಜು ತಂಡವನ್ನು ಸೋಲಿಸಿತು. ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉಜಿರೆಯ ಎಸ್ ಡಿಎಂ ಕಾಲೇಜು ತಂಡವು ತೆಂಕನಿಡಿಯೂರು ಸರಕಾರಿ ಪದವಿ ಕಾಲೇಜಿನ ತಂಡವನ್ನು 28-13 ಪಾಯಿಂಟ್ ಗಳ ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿತು. ಮೂರನೆ ಕ್ವಾರ್ಟರ್ ಫೈನಲ್ ನಲ್ಲಿ ಆಳ್ವಾಸ್ ಕಾಲೇಜು ತಂಡವು ಬೆಸೆಂಟ್ ಸಂಧ್ಯಾ ಕಾಲೇಜು ತಂಡದ ವಿರುದ್ಧ 26-12 ಪಾಯಿಂಟ್ ಗಳ ಅಂತರದಲ್ಲಿ ಜಯ ಸಾಧಿಸಿತು. ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್  ಕಾಲೇಜು ತಂಡವು ಪಿ.ಪಿ ಸಂಧ್ಯಾ ಕಾಲೇಜು ತಂಡವನ್ನು 43-5ರ ಭಾರೀ ಅಂತರದಿಂದ ಸೋಲಿಸಿತು.

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಎಸ್ ಡಿಎಂ ಕಾಲೇಜು ತಂಡವು ಸೇಕ್ರೆಡ್ ಹಾರ್ಟ್ ತಂಡವನ್ನು 25-17ರ ಅಂತರದಲ್ಲಿ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿತು. ಎರಡನೆ ಸೆಮಿಫೈನನಲ್ಲಿ ಆಳ್ವಾಸ ಕಾಲೇಜು ತಂಡವು ಮಂಗಳೂರು ವಿಶ್ವವಿದ್ಯಾಲಯ ತಂಡವನ್ನು 37-16ರ ದೊಡ್ಡ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News