ತುಳುಕೂಟದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಪುನರಾಯ್ಕೆ
ಉಡುಪಿ, ಅ.19: ತುಳುಕೂಟ ಉಡುಪಿ ಇದರ ನೂತನ ಅಧ್ಯಕ್ಷರಾಗಿ ಜಯಕರ್ ಶೆಟ್ಟಿ ಇಂದ್ರಾಳಿ ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಉಡುಪಿ ತುಳುಕೂಟದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಡುಪಿ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ನ ಪ್ರ.ಕಾರ್ಯದರ್ಶಿ, ಅಖಿಲ ಭಾರತ ತುಳುವರ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಜಯಕರ್ ಶೆಟ್ಟಿ ಅಧ್ಯಕ್ಷರಾಗಿ ಹಾಗೂ ಮಾಜಿ ಅಧ್ಯಕ್ಷ ಡಾ.ಭಾಸ್ಕರಾನಂದ ಕುಮಾರ್ ಗೌರವಾಧ್ಯಕ್ಷರಾಗಿ ಆಯ್ಕೆಯಾದರು.
ಗೌರವ ಸಲಹೆಗಾರರಾಗಿ ಬನ್ನಂಜೆ ಬಾಬು ಅಮೀನ್, ಭುವನ ಪ್ರಸಾದ್, ಗಣನಾಥ್ ಎಕ್ಕಾರ್, ಯು.ಉಪೇಂದ್ರ, ದಿನೇಶ್ ಪುತ್ರನ್, ಮುರಳೀಧರ್ ಉಪಾಧ್ಯಾಯ, ಉಪಾಧ್ಯಕ್ಷರಾಗಿ ಮುಹಮ್ಮದ್ ಮೌಲಾ, ಯಶೋಧ ಕೇಶವ್, ವಿ.ಜಿ.ಶೆಟ್ಟಿ, ಪ್ರ.ಕಾರ್ಯದರ್ಶಿಯಾಗಿ ಗಂಗಾಧರ್ ಕಿದಿಯೂರ್, ಜೊತೆ ಕಾರ್ಯದರ್ಶಿಯಾಗಿ ಮೋಹನ್ ಶೆಟ್ಟಿ, ಕೋಶಾಧಿಕಾರಿ ಎಂ.ಜಿ.ಚೈತನ್ಯಾ ಆಯ್ಕೆಯಾದರು.
ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್, ಆಂತರಿಕ ಲೆಕ್ಕಪರಿಶೋಧಕರಾಗಿ ಸದಾಶಿವ ಭಟ್, ಕೆಮ್ತೂರು ನಾಟಕ ಪ್ರಶಸ್ತಿ ಸಂಚಾಲಕರಾಗಿ ಪ್ರಭಾಕರ ಭಂಡಾರಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ ಸಂಚಾಲಕರಾಗಿ ಪ್ರಕಾಶ್ ಸುವರ್ಣ ಕಟ್ಪಾಡಿ, ಮಲ್ಪೆ ರಾಮದಾಸ ಸಾಮಗ ಯಕ್ಷಗಾನ ಪ್ರಶಸ್ತಿ ಸಂಚಾಲಕರಾಗಿ ಎಸ್.ವಿ.ಭಟ್, ನಿಟ್ಟೂರು ಭಾವಗೀತೆ ಸ್ಪರ್ಧೆ ಸಂಚಾಲಕರಾಗಿ ವಿವೇಕಾನಂದ ಎನ್., ತುಳು ಮಿನದನ ಒಡಿಪು ಸಂಚಾಲಕರಾಗಿ ವಿ.ಕೆ.ಯಾದವ ಕರ್ಕೇರ, ಮದಿರೆಂಗಿದ ರಂಗ್ ಕಾರ್ಯಕ್ರಮದ ಸಂಚಾಲಕಿಯಾಗಿ ತಾರಾ ಆಚಾರ್ಯ, ಆಟಿದ್ ಗೊಬ್ಬು ಕಾರ್ಯಕ್ರಮದ ಸಂಚಾಲಕಿಯಾಗಿ ವೀಣಾ ಎಸ್. ಶೆಟ್ಟಿ, ಸೋಣದ ಸೇಸೆ ಕಾರ್ಯಕ್ರಮದ ಸಂಚಾಲಕರಾಗಿ ರತ್ನಾಕರ ಇಂದ್ರಾಳಿ ಆಯ್ಕೆಯಾದರು. ತುಳುಕೂಟದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಣೇಶ್ ಕೋಟ್ಯಾನ್, ಯು.ಭೋಜ, ಯು.ಜೆ.ದೇವಾಡಿಗ, ಜ್ಯೋತಿ ಎಸ್.ದೇವಾಡಿಗ, ದಯಾನಂದ ಡಿ., ಶ್ರೀಧರ ಶೆಟ್ಟಿ, ಶೇಖರ್ ಕಲ್ಮಾಡಿ, ಅಶೋಕ್ ಶೆಟ್ಟಿ ಕದಂಬ, ದಿವಾಕರ್ ಸನಿಲ್, ಉದಯ ಶೆಟ್ಟಿ ಇಂದ್ರಾಳಿ, ಸರೋಜಾ ಯಶವಂತ್, ಅಲೆವೂರ್ ಗಣಪತಿ ಕಿಣಿ, ಲಕ್ಷ್ಮೀಕಾಂತ್ ಬೆಸ್ಕೂರ್, ಮನೋರಮಾ ಶೆಟ್ಟಿ, ತಲ್ಲೂರು ಶಿವರಾಮ ಶೆಟ್ಟಿ, ಪರಮೇಶ್ವರ ಅಧಿಕಾರಿ ಮಟ್ಟು ಹಾಗೂ ಮನೋಹರ್ ಶೆಟ್ಟಿ ತೋನ್ಸೆ, ಗೋಪಾಲ್ ಕೆ. ಆಯ್ಕೆಯಾಗಿದ್ದಾರೆ ಎಂದು ತುಳುಕೂಟದ ಪ್ರಕಟನೆ ತಿಳಿಸಿದೆ.