×
Ad

ಫರಂಗಿಪೇಟೆ:ನಿಯಮ ಉಲ್ಲಂಘಿಸಿದ ವಾಹನಗಳಿಗೆ ಟ್ರಾಫಿಕ್ ಪೊಲೀಸರಿಂದ ದಂಡ

Update: 2016-10-19 23:51 IST

ಫರಂಗಿಪೇಟೆ, ಅ.19: ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳಿಂದ ಬಂಟ್ವಾಳ ಟ್ರಾಫಿಕ್ ಉಪನಿರೀಕ್ಷಕ ಚಂದ್ರಪ್ರಕಾಶ್ ರೈ ನೇತೃತ್ವದಲ್ಲಿ ಭರ್ಜರಿ ದಂಡ ವಸೂಲಿ ಮಾಡಲಾಯಿತು. ಸೋಮವಾರ 141, ಮಂಗಳವಾರ 62, ಬುಧವಾರ 175 ವಾಹನಗಳನ್ನು ತಪಾಸಣೆ ನಡೆಸಲಾಯಿತು.

ಹೆಲ್ಮೆಟ್ ರಹಿತ ಪ್ರಯಾಣ, ಸೀಟ್ ಬೆಲ್ಟ್ ಹಾಕದ, ಓವರ್ ಸ್ಪೀಡ್ ಡ್ರೈವ್ ಮಾಡಿದ ಸವಾರರಿಗೆ ದಂಡ ವಿಧಿಸಲಾಯಿತು. 

ಫರಂಗಿಪೇಟೆಯ ಹೆದ್ದಾರಿಯ ಎರಡು ಬದಿಯಲ್ಲಿ ದ್ವಿಚಕ್ರ ಮತ್ತು ಇನ್ನಿತರ ವಾಹನ ಅನಧಿಕೃತ  ಪಾರ್ಕಿಂಗ್ ಮಾಡುವುದರ ಬಗ್ಗೆ ಪ್ರಯಾಣಿಕರಿಗೂ ಪಾದಚಾರಿಗಳಿಗೆ ಆಗುವ ತೊಂದರೆ ಬಗ್ಗೆ  ನಾಗರಿಕರಿಂದ ದೂರುಗಳು ಬಂದ ಪರಿಣಾಮ ಬಂಟ್ವಾಳ ಟ್ರಾಫಿಕ್ ಪೋಲಿಸರಿಂದ ತಪಾಸಣೆ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News