ಟಿಪ್ಪುಜಯಂತಿ ಆಚರಣೆ ನಿಷೇಧಕ್ಕೆ ಆಗ್ರಹಿಸಿ ಧರಣಿ
Update: 2016-10-19 23:55 IST
ಪುತ್ತೂರು, ಅ.19: ರಾಜ್ಯ ಸರಕಾರ ಕಳೆದ ವರ್ಷದಿಂದ ಆರಂಭಿಸಿರುವ ಟಿಪ್ಪು ಜಯಂತಿ ಆಚರಣೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಪುತ್ತೂರಿನ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಕಾರ್ಯಕರ್ತರು ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಡಾ.ಎಂ.ಕೆ. ಪ್ರಸಾದ್ ಭಂಡಾರಿ,, ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ತಾಪಂ ಸದಸ್ಯ ಶಿವರಂಜನ್ ಎಂ., ಸಹ ಸಂಚಾಲಕ ಪ್ರಜ್ವಲ್, ಪ್ರಮುಖರಾದ ಡೀಕಯ್ಯ ಪೆರ್ವೋಡಿ, ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತಡ್ಕ, ಗೋಪಾಲ ಕೃಷ್ಣ ಹೇರಳೆ, ನಗರಸಭಾ ಉಪಾಧ್ಯಕ್ಷ ವಿಶ್ವನಾಥ ಗೌಡ, ಸದಸ್ಯರಾದ ಜೀವಂಧರ ಜೈನ್, ರಾಜೇಶ್ ಬನ್ನೂರು, ವನಿತಾ ಕೆ.ಟಿ., ಉಪಸ್ಥಿತರಿದ್ದರು.