ಮೊಸುಲ್‌ನಲ್ಲಿ 6000 ಐಸಿಸ್ ಭಯೋತ್ಪಾದಕರು
Update: 2016-10-19 23:59 IST
ಅರ್ಬಿಲ್ (ಇರಾಕ್), ಅ. 19: ಐಸಿಸ್ ನಿಯಂತ್ರಣದಲ್ಲಿರುವ ಇರಾಕ್‌ನ ಮೊಸುಲ್ ನಗರವನ್ನು ಉಳಿಸಿಕೊಳ್ಳಲು 5000-6000 ಭಯೋತ್ಪಾದಕರು ಇರಾಕ್ ಸೇನೆಯ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಇರಾಕ್‌ನ ವಿಶೇಷ ಪಡೆಗಳ ಮುಖ್ಯಸ್ಥ ಲೆ.ಜನರಲ್ ತಾಲಿಬ್ ಶಘಟಿ ಬುಧವಾರ ಹೇಳಿದ್ದಾರೆ. ‘‘ಮೊಸುಲ್ ನಗರದಲ್ಲಿ 5000ದಿಂದ 6000 ಐಸಿಸ್ ಭಯೋತ್ಪಾದಕರಿದ್ದಾರೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದೆ’’ ಎಂದು ಶಘಟಿ ಇಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ತಿಳಿಸಿದರು.