‘ನುಡಿಸಿರಿ’ಯಲ್ಲಿ ಚಿತ್ರಕಲಾ ಮೇಳ ಹಾಗೂ ಪ್ರದರ್ಶನ

Update: 2016-10-19 18:37 GMT

ಮೂಡುಬಿದಿರೆ, ಅ.19: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಚಿತ್ರಕಲೆಯ ಕುರಿತು ಜನಜಾಗೃತಿಗಾಗಿ ಚಿತ್ರಸಂತೆಯನ್ನು ಆಯೋಜಿಸಿದ್ದು, ನಾಡಿನ ಚಿತ್ರಕಲಾವಿದರಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ನ.18ರಿಂದ 20ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿರಿಯ ಸಂದರ್ಭ ಈ ಚಿತ್ರಕಲಾ ಮೇಳವನ್ನು ಏರ್ಪಡಿಸಲಾಗುವುದು.

ರಾಜ್ಯದ ವಿವಿಧ ಜಿಲ್ಲೆಗಳ ಚಿತ್ರಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನದ ಜೊತೆಗೆ ಸ್ಥಳದಲ್ಲೇ ಮಾರಾಟವನ್ನೂ ಮಾಡಬಹುದು. ಕಲಾ ಶಾಲೆಗಳ ವಿದ್ಯಾರ್ಥಿಗಳೂ ತಮ್ಮ ಶಾಲಾ ಮುಖ್ಯಸ್ಥರ ಅನುಮತಿ ಪತ್ರದೊಂದಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ. ಒಬ್ಬರು ಗರಿಷ್ಠ ಎರಡು ಮಳಿಗೆಗಳನ್ನು ಪಡೆಯಲು ಅವಕಾಶವಿದೆ. ಕಲಾಕೃತಿಗಳ ಪ್ರದರ್ಶನಕ್ಕಾಗಿ 7 ಅಡಿ ಎತ್ತರ ಹಾಗೂ 10 ಅಡಿ ಅಗಲ ವಿಸ್ತಾರದ ಸಮತಳ ಮಳಿಗೆಗಳನ್ನು ನೀಡಲಾಗುವುದು. ಉಳಿದಂತೆ ಪ್ರದರ್ಶನಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಚಿತ್ರಕಲಾವಿದರೇ ತರಬೇಕಾಗುತ್ತದೆ. ನ.18ರ ಬೆಳಗ್ಗೆ 9 ಗಂಟೆಯೊಳಗೆ ಮಳಿಗೆಗಳಲ್ಲಿ ತಮ್ಮ ಕಲಾಕೃತಿಗಳ ಪ್ರದರ್ಶನ ಸಂಪೂರ್ಣಗೊಳಿಸಿರಬೇಕು. ಕಲಾವಿದರು ತಮ್ಮ ಮಳಿಗೆಗಳಲ್ಲಿ ಚಿತ್ರಕಲೆಯ ಕುರಿತು ಪ್ರಾತ್ಯಕ್ಷಿಕೆ ನೀಡಬಹುದು. ಭಾಗವಹಿಸುವ ಪ್ರತೀ ಚಿತ್ರಕಲಾವಿದರಿಗೂ ಉಚಿತ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಕಲಾವಿದರಿಗೆ ಅಭಿನಂದನಾ ಪತ್ರವನ್ನೂ ನೀಡಲಾಗುವುದು.

ಆಸಕ್ತರು ನ.15ರೊಳಗೆ ತಮ್ಮ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಬೇಕಾದ ಮಳಿಗೆ ವಿವರ, ಇತ್ಯಾದಿ ವಿವರಗಳೊಂದಿಗೆ ಅರ್ಜಿಗಳನ್ನು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ-574227 ಈ ವಿಳಾಸಕ್ಕೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಕಲಾವಿದರಿಗೆ ಮಳಿಗೆ ಸಂಖ್ಯೆ ನೀಡಲಾಗುವುದು.

ಆನ್‌ಲೈನ್ ಅರ್ಜಿಗಳಿಗಾಗಿ www.alvasnudisiri.comಗೆ ಭೇಟಿ ನೀಡಬಹುದು. ಹೆಚ್ಚಿನ ವಿವರಗಳಿಗೆ ಭಾಸ್ಕರ್ ನೆಲ್ಯಾಡಿ ಮೊ.ಸಂ.: 9901114843 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News