ಪೆರ್ಲ ಪರಿಸರದಲ್ಲಿ ಕಾಡುಕೋಣಗಳ ಹಾವಳಿ: ಕೃಷಿ ನಾಶ

Update: 2016-10-19 18:42 GMT

ಕಾಸರಗೋಡು, ಅ.19: ಪೆರ್ಲ, ಕಾಟುಕುಕ್ಕೆ ಪರಿಸರದಲ್ಲಿ ಕಾಡುಕೋಣಗಳ ಹಿಂಡು ನುಗ್ಗಿ ದಾಂಧಲೆ ಎಸಗುತ್ತಿದೆ. ಇದ ರಿಂದ ಭಾರೀ ಪ್ರಮಾಣದಲ್ಲಿ ಕೃಷಿ ಹಾನಿ ಉಂಟಾಗಿದ್ದು, ಪರಿಸರವಾಸಿಗಳು ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
 ಕಳೆದ ಮೂರು ದಿನಗಳಿಂದ ಕಾಡುಕೋಣಗಳು ಹಿಂಡು ಹಿಂಡಾಗಿ ಕೃಷಿ ಪ್ರದೇಶಗಳಿಗೆ ನುಗ್ಗುತ್ತಿವೆ. ಆರಕ್ಕೋಡಿ, ಕಾಟುಕುಕ್ಕೆ, ಗುತ್ತು, ಮುಂಡಾಜೆ ಮೊದಲಾದೆಡೆಗಳಲ್ಲಿ ಕಾಡು ಕೋಣಗಳ ದಾಳಿಯಿಂದ ಅಪಾರ ಕೃಷಿ ನಾಶವಾಗಿದೆ.
 ಇಲ್ಲಿನ ಗೋಪಾಲಕೃಷ್ಣ ಭಟ್ ಎಂಬವರ ಮನೆ ಹಿತ್ತಿಲಿ ನಲ್ಲಿದ್ದ ಬಾಳೆಕೃಷಿ, ಅಪ್ಪುಕುಟ್ಟನ್ ಎಂಬವರ ಭತ್ತದ ಕೃಷಿ ಕಾಡುಕೋಣಗಳ ಹಾವಳಿಗೆ ಧ್ವಂಸಗೊಂಡಿದೆ.
 ಹಿಂಡಿನಲ್ಲಿ ಆರಕ್ಕೂ ಅಧಿಕ ಕಾಡುಕೋಣಗಳು ಇವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಡಿ ಪ್ರದೇಶದ ರಕ್ಷಿತಾರಣ್ಯದಿಂದ ಇವು ನಾಡಿಗಿಳಿದಿರಬ ಹುದು ಎಂದು ಶಂಕಿಸಲಾಗಿದೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News