ಕಾಂಗ್ರೆಸ್‌ನಿಂದ ಸಿಧುಗೆ ಉಪಮುಖ್ಯಮಂತ್ರಿ ಸ್ಥಾನದ ಕೊಡುಗೆ!

Update: 2016-10-20 11:06 GMT

ಹೊಸದಿಲ್ಲಿ, ಅಕ್ಟೋಬರ್ 20: ಬಿಜೆಪಿಗೆ ರಾಜೀನಾಮೆ ನೀಡಿರುವ ನವಜೋತ್‌ಸಿಂಗ್ ಸಿಧುಗೆ ಕಾಂಗ್ರೆಸ್ ವತಿಯಿಂದ ಉಪಮುಖ್ಯಮಂತ್ರಿಸ್ಥಾನದ ಕೊಡುಗೆಯ ಪ್ರಸ್ತಾಪ ನೀಡಲಾಗಿದೆ. ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಜಯಶಾಲಿಯಾದರೆ ಸಿಧುವನ್ನು ಕಾಂಗ್ರೆಸ್ ಉಪಮುಖ್ಯಮಂತ್ರಿಯನ್ನಾಗಿ ಮಾಡಲಿದೆ ಎಂದು ವರದಿಯೊಂದು ತಿಳಿಸಿದೆ.

ಸಿಧುವನ್ನು ಹೇಗಾದರೂ ಮಾಡಿ ಕಾಂಗ್ರೆಸ್‌ಗೆ ಸೆಳೆಯುವ ಯತ್ನ:

ಸಿಧುರ ನಿಕಟ ಮೂಲಗಳ ಪ್ರಕಾರ ಕಾಂಗ್ರೆಸ್ ಬಿಜೆಪಿಯ ಮಾಜಿನಾಯಕ ಮತ್ತು ಅವಾಝ್ ಎ ಪಂಜಾಬ್ ಪ್ರಂಟ್ ರಚಿಸಿರುವ ಸಿಧುವನ್ನು ಹೇಗಾದರೂ ಮಾಡಿ ಕಾಂಗ್ರೆಸ್‌ನತ್ತ ಸೆಳೆಯುವ ಪ್ರಯತ್ನವನ್ನು ಅದು ಮಾಡುತ್ತಿದೆ. ಆದ್ದರಿಂದ ಸಿಧುಗೆ ಉಪಮುಖ್ಯಮಂತ್ರಿ ಸ್ಥಾನದ ಕೊಡುಗೆ ನೀಡಲಾಗಿದೆ.ಸಿಧುರ ಫ್ರಂಟ್‌ಗೆ 13 ವಿಧಾನಸಭಾ ಸೀಟುಗಳನ್ನು ಕೂಡಾ ಕಾಂಗ್ರೆಸ್ ಬಿಟ್ಟುಕೊಡಲಿದೆ. ಆದರೆ ಸಿಧು ಈ ಪ್ರಸ್ತಾವನ್ನು ಸ್ವೀಕರಿಸುತ್ತಾರೊ ನಿರಾಕರಿಸುತ್ತಾರೊ ಎಂದು ತಿಳಿದಿಲ್ಲ.

ಕ್ಯಾಪ್ಟನ್ ಅಮರೇಂದ್ರ ಸಿಂಗ್ ರಾಜಿ:

ಸಿಧುರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕ್ಯಾಪ್ಟನ್ ಅಮರೇಂದ್ರ ಸಿಂಗ್‌ರನ್ನು ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಂಜಾಬ್‌ನ ಚುನಾವಣೆಯ ಕುರಿತ ಒಪಿನಿಯನ್ ಪೋಲ್ ಬಗ್ಗೆ ಕಾಂಗ್ರೆಸ್‌ನಲ್ಲಿ ನಡುಕ ಸೃಷ್ಟಿಯಾಗಿದ್ದು ಅದು ಸಿಧುವನ್ನು ಒಲೈಸಲು ಮುಖ್ಯ ಕಾರಣ ಎನ್ನಲಾಗಿದೆ. ಪಂಜಾಬ್‌ನ ಮುಖ್ಯಸ್ಥ ಅಮರೇಂದ್ರ ಸಿಂಗ್‌ರ ಮಾತನ್ನು ಕಡೆಗಣಿಸಲು ಕೂಡಾ ಕಾಂಗ್ರೆಸ್ ಹೈಕಮಾಂಡ್‌ನಿಂದ ಸಾಧ್ಯವಿಲ್ಲ. ಸರಕಾರ ರಚಿಸುವ ಸ್ಥಿತಿಗೆ ಕಾಂಗ್ರೆಸ್ ಬಂದರೆ ಸಿಧುಗೆ ಅಮೃತಸರದಿಂದ ಲೋಕಸಭಾಟಿಕೆಟ್ ಮತ್ತು ಅವರ ಬೆಂಬಲಿಗರಿಗೆ ರಾಜ್ಯದಲ್ಲಿ ಸಚಿವಸ್ಥಾನದ ಇನ್ನೊಂದು ಕೊಡುಗೆಯನ್ನು ಕೂಡಾ ಕಾಂಗ್ರೆಸ್ ನೀಡುವ ಸಾಧ್ಯತೆ ಇದೆ ಎಂದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News