×
Ad

ಕಾಂಗ್ರೆಸ್ ನಾಯಕಿ ರೀಟಾ ಬಹುಗುಣ ಬಿಜೆಪಿಗೆ

Update: 2016-10-20 18:02 IST

ಲಕ್ನೊ, ಅ.20: ಉತ್ತರಪ್ರದೇಶದ ಕಾಂಗ್ರೆಸ್ ನಾಯಕಿ ರೀಟಾ ಬಹುಗುಣ ಜೋಶಿ ಇಂದು ಬಿಜೆಪಿ ಸೇರಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಇದು ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ.

ಕಾಂಗ್ರೆಸ್ ಮುತ್ಸದ್ದಿ ಹೇಮವತಿ ನಂದನ ಬಹುಗುಣರ ಪುತ್ರಿಯಾಗಿರುವ ರೀಟಾ ಉತ್ತರಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷೆಯಾಗಿದ್ದರು. ಅವರು ಪಕ್ಷಾಧ್ಯಕ್ಷ ಅಮಿತ್ ಶಾರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

ರೀಟಾರ ಸಹೋದರ, ಮಾಜಿ ಕಾಂಗ್ರೆಸ್ ನಾಯಕ ಹಾಗೂ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಬಿಜೆಪಿ ಸೇರಿದ್ದರು. ಆದರೆ, 67ರ ಹರೆಯದ ಲಕ್ನೊ ಕಂಟೋನ್ಮೆಂಟ್‌ನ ಶಾಸಕಿ, ಅವರನ್ನು ಅನುಸರಿಸುವುದಿಲ್ಲವೆಂದು ಕಾಂಗ್ರೆಸ್ ಪ್ರತಿಪಾದಿಸಿತ್ತು.

ಉತ್ತರಪ್ರದೇಶ ವಿಧಾನಸಭೆಯ ಮುಂದಿನ ಚುನಾವಣೆಗೆ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿ ರಾಜ್ಯದವರನ್ನು ಕಡೆಗಣಿಸಿದ ಕಾಂಗ್ರೆಸ್‌ನ ನಡೆಯ ಬಗ್ಗೆ ರೀಟಾ ಅಸಮಾಧಾನಿತರಾಗಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News