ಕುಂದಾಪುರ ಕೃಷಿ ಕೂಲಿಕಾರರ ತಾಲೂಕು ಸಮ್ಮೇಳನ

Update: 2016-10-20 12:45 GMT

ಉಡುಪಿ, ಅ.20: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮಿತಿಯ ವತಿಯಿಂದ ಇತ್ತೀಚೆಗೆ ಕುಂದಾಪುರದಲ್ಲಿ ಆಯೋಜಿಸಲಾದ ತಾಲೂಕು ಸಮ್ಮೇಳನವನ್ನು ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಎನ್.ನಾಗರಾಜ್ ಉದ್ಘಾಟಿಸಿದರು.

ರಾಜ್ಯ ಸಮಿತಿಯ ಕರೆಯ ಮೇರೆಗೆ ಮನೆ, ನಿವೇಶನ ರಹಿತ ಅರ್ಜಿದಾರ ರಿಗೆ, ಸರಕಾರಿ ಜಮೀನು ಗುರುತಿಸಿ ನಿವೇಶನ ಹಕ್ಕು ಪತ್ರ ಮಂಜೂರು ಮಾಡಲು ಆಗ್ರಹಿಸಿ ರಾಜ್ಯಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ನಿವೇಶನ ರಹಿತರು 94ಸಿ, 94ಸಿಸಿ ಕಲಂನಡಿಯ ಅರ್ಜಿ ದಾರರು ನ.18ರಂದು ಜೈಲ್ ಭರೋ ಹೋರಾಟ ಚಳವಳಿ ನಡೆಸುವುದರ ಮೂಲಕ ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ಸಂಘದ ಧ್ವಜಾರೋಹಣವನ್ನು ಉಡುಪಿ ಜಿಲ್ಲಾಧ್ಯಕ್ಷ ಯು.ದಾಸ ಭಂಡಾರಿ ನೆರವೇರಿಸಿದರು. ಮನೆ ನಿವೇಶನ ಅರ್ಜಿದಾರರಿಗೆ ಕೂಡಲೇ ಭೂಮಿ ಹಕ್ಕು ಪತ್ರ ವಿತರಣೆ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಭೂಕಂದಾಯ ಕಾಯಿದೆ ಯನ್ವಯ 94ಸಿ ಕಲಂ ಖಾತೆ ಅರ್ಜಿ ಸಲ್ಲಿಸಿದವರಿಗೆ ಗೋಮಾಳ, ಅರಣ್ಯ ಭೂಮಿ, ಡೀಮ್ಡ್ ಫಾರೆಸ್ಟ್ ಮುಂತಾದ ಕಾನೂನಾತ್ಮಕ ತೊಡಕನ್ನು ನಿವಾರಿಸಿ ಹಕ್ಕು ಪತ್ರ ಮಂಜೂರು ಮಾಡಬೇಕು. ದಿನಬಳಕೆ ಆಹಾರ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಎಂಬ ಬೇಡಿಕೆಗಳನ್ನು ಈಡೇರಿಸಲು ಸರಕಾರ ವನ್ನು ಒತ್ತಾಯಿಸಿ ಠರಾವುಗಳನ್ನು ಮಂಡಿಸಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಂಕರ, ಮಹಾಬಲ ವಡೇರಹೋಬಳಿ, ಯು.ದಾಸ ಭಂಡಾರಿ, ರಾಜೀವ ಪಡು ಕೋಣೆ, ಶೀಲಾವತಿ, ಪಳ್ಳಿ ಉಸ್ಮಾನ್ ಗುಲ್ವಾಡಿ, ರಮೇಶ ಪೂಜಾರಿ, ಚಿಕ್ಕ ಮೊಗವೀರ ಗಂಗೊಳ್ಳಿ, ಪದ್ಮಾವತಿ ಶೆಟ್ಟಿ, ನಾಗರತ್ನ ನಾಡ, ವೆಂಕಟೇಶ ಕೋಣಿ ನಾಗರತ್ನ ನಾಡ, ಪದ್ಮಾವತಿ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News