ಝಾಕಿರ್ ನಾಯ್ಕ್ ಎನ್‌ಜಿಒ ಪ್ರಕರಣ: ಅಧಿಕಾರಿಯ ಅಮಾನತು ರದ್ದು

Update: 2016-10-20 14:08 GMT

ಹೊಸದಿಲ್ಲಿ,ಅ.20: ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕಾ ಅವರ ಎನ್‌ಜಿಒದ ಪರವಾನಿಗೆಯ ನವೀಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಎಎಸ್ ಅಧಿಕಾರಿ ಜಿ.ಕೆ.ದ್ವಿವೇದಿ ಅವರ ಅಮಾನತನ್ನು ಸರಕಾರವು ಹಿಂದೆಗೆದುಕೊಂಡಿದೆ,ಆದರೆ ಅವರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ‘ಕಡ್ಡಾಯವಾಗಿ ಕಾಯುವಿಕೆ ’ಪಟ್ಟಿಯಲ್ಲಿರಿಸಿದೆ. ಅಂದರೆ ಅವರು ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ಇಲಾಖೆಗೆ ಮರಳುವಂತಿಲ್ಲ. ಅವರನ್ನು ಬೇರೆ ಸಚಿವಾಲಯಕ್ಕೆ ಎತ್ತಂಗಡಿ ಮಾಡಬಹುದು ಅಥವಾ ಅವರ ಮಾತೃ ಕೇಡರ್‌ಗೆ ವಾಪಸ್ ಕಳುಹಿಸಬಹುದು.

ನಾಯ್ಕ ವಿರುದ್ಧ ಹಲವಾರು ತನಿಖೆಗಳು ಪ್ರಗತಿಯಲ್ಲಿದ್ದರೂ ಅವರ ನೇತೃತ್ವದ ಎನ್‌ಜಿಒದ ಪರವಾನಿಗೆಯನ್ನು ಈ ವರ್ಷದ ಆಗಸ್ಟ್‌ನಲ್ಲಿ ನವೀಕರಿಸಿದ್ದು ಬೆಳಕಿಗೆ ಬಂದ ನಂತರ ಸೆ.1ರಂದು ಗೃಹ ಸಚಿವಾಲಯದ ವಿದೇಶಿಯರ ವಿಭಾಗದಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದ ದ್ವಿವೇದಿ,ಇಬ್ಬರು ಉಪ ಕಾರ್ಯದರ್ಶಿಗಳು ಮತ್ತು ಓರ್ವ ಸೆಕ್ಷನ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಭಯೋತ್ಪಾದಕ ಗುಂಪುಗಳನ್ನು ಸೇರಲು ಯುವಜನರ ಮನ ಪರಿವರ್ತನೆ ಮಾಡುತ್ತಿದ್ದ ಆರೋಪವನ್ನು ನಾಯ್ಕಿ ವಿರುದ್ಧ ಹೊರಿಸಲಾಗಿದೆ. ಆದರೆ ಅವರ ಸಂಸ್ಥೆಯು ಇದನ್ನು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News