×
Ad

ಅಮೆರಿಕಕ್ಕೆ ಕೈಕೊಟ್ಟ ಫಿಲಿಪ್ಪೀನ್ಸ್

Update: 2016-10-20 22:58 IST

ಬೀಜಿಂಗ್, ಅ. 20: ಅಮೆರಿಕದೊಂದಿಗಿನ ಸುದೀರ್ಘ ಮೈತ್ರಿಯನ್ನು ‘‘ಕಳಚಿಕೊಂಡಿರುವುದಾಗಿ’’ ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಗುರುವಾರ ಘೋಷಿಸಿದ್ದಾರೆ. ಇದರೊಂದಿಗೆ, ಅವರು ಚೀನಾದತ್ತ ಸ್ನೇಹದ ಕೈಚಾಚಿದ್ದಾರೆ.

‘‘ಅಮೆರಿಕದಿಂದ ಪ್ರತ್ಯೇಕಗೊಂಡಿರುವುದನ್ನು ನಾನು ಘೋಷಿಸುತ್ತಿದ್ದೇನೆ’’ ಎಂದು ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಸಭೆಯೊಂದರಲ್ಲಿ ಅವರು ಘೋಷಿಸಿದರು. ಅವರ ಘೋಷಣೆಯನ್ನು ಚಪ್ಪಾಳೆ ಮೂಲಕ ಸ್ವಾಗತಿಸಲಾಯಿತು.

ತಿಯನಾನ್ಮೆನ್ ಚೌಕದಲ್ಲಿರುವ ‘ಗ್ರೇಟ್ ಹಾಲ್ ಆಫ್ ಪೀಪಲ್’ನಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜೊತೆ ಮಾತುಕತೆ ನಡೆಸಿದ ಬಳಿಕ ಫಿಲಿಪ್ಪೀನ್ಸ್ ಅಧ್ಯಕ್ಷರ ಘೋಷಣೆ ಹೊರಬಿದ್ದಿದೆ.

 ಸಾಗರ ಗಡಿಯ ಬಗ್ಗೆ ಇರುವ ವಿವಾದವನ್ನು ಬದಿಗಿರಿಸಿ, ನಂಬಿಕೆ ಮತ್ತು ಸ್ನೇಹವನ್ನು ಹೆಚ್ಚಿಸಲು ಉಭಯ ನಾಯಕರು ಈ ಸಂದರ್ಭದಲ್ಲಿ ನಿರ್ಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News