ಅ.21ರಂದು ಮಸ್ಜಿದುತಖ್ವಾದಲ್ಲಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್‌ರಿಂದ ವಿಶೇಷ ಉಪನ್ಯಾಸ
Update: 2016-10-20 23:14 IST
ಮಂಗಳೂರು, ಅ.20: ಪಂಪ್‌ವೆಲ್‌ನ ಮಸ್ಜಿದುತಖ್ವಾದಲ್ಲಿ ಅ.21ರಂದು ಜುಮಾ ನಮಾಝ್‌ನ ನಂತರ ಮುಸ್ಲಿಂ ಪರ್ಸನಲ್ ಲಾ (ಶರೀಅತ್) ಮತ್ತು ಸಮಾನ ನಾಗರಿಕ ಸಂಹಿತೆ ಬಗ್ಗೆ ಕರ್ಣಾಟಕ ರಾಜ್ಯ ಸುನ್ನೀ ಜಂಇಯತುಲ್ ಉಲಮಾದ ಅಧ್ಯಕ್ಷ ಖಾಝಿ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಬಿ.ಎಂ. ಮುಮ್ತಾಝ್ ಅಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.