×
Ad

ಗೋವಾ: ಯುವಕನ ಮೇಲೆ ಹಲ್ಲೆ: ಐವರು ನೌಕಾಪಡೆ ಸಿಬ್ಬಂದಿ ಸೆರೆ

Update: 2016-10-20 23:29 IST

ಪಣಜಿ,ಅ.20: ಇಲ್ಲಿಗೆ ಸಮೀಪದ ವಾಸ್ಕೋದಲ್ಲಿ ಕ್ಷುಲ್ಲಕ ಕಾರಣಕ್ಕ್ಕಾಗಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ನೌಕಾಪಡೆಯ ಐವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಐಎನ್‌ಎಸ್ ಹಂಸಾ ನೌಕಾನೆಲೆಯ ಸಿಬ್ಬಂದಿಯಾದ ರಾಜೇಶ ಪಾಚಾರ್, ಶಾಮಲಾಲ ಸಿಂಗ್ ತಕ್ಷಕ್, ಜಿತೇಂದ್ರ ಸಿಂಗ್, ಅಮಿತ ಕುಮಾರ್ ಮತ್ತು ಅನುಪಮ್ ಶರ್ಮಾ ಬಂಧಿತ ಆರೋಪಿಗಳು.
ಈ ಐವರು ನಿನ್ನೆ ಪ್ರಯಾಣಿಸುತ್ತಿದ್ದ ನೌಕಾಪಡೆಯ ವಾಹನ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಸವಾರ ಅತುಲ್ ಬಿಚೋಲಿಕರ್ ರಸ್ತೆಗೆಸೆಯಲ್ಪಟ್ಟಿದ್ದ. ಆರೋಪಿಗಳು ಆತನಿಗೆ ಕೈಗಳಿಂದ ಹೊಡೆದು, ಲೋಹದ ಪೈಪಿನಿಂದ ಥಳಿಸಿದ್ದರು. ತೀವ್ರವಾಗಿ ಗಾಯ ಗೊಂಡಿರುವ ಬಿಚೋಲಿಕರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ದೂರು ದಾಖಲಿಸಿಕೊಂಡ ವಾಸ್ಕೋ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News