ನ.1ರಂದು ಕರಾಳ ದಿನಾಚರಣೆ
Update: 2016-10-20 23:51 IST
ಉಡುಪಿ, ಅ.20: ತುಳುನಾಡಿನ ನೆಲ ಜಲವನ್ನು ನಾಶಗೊಳಿಸುತ್ತಿರುವವರ ವಿರುದ್ಧ ನ.1ರಂದು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಕರಾಳ ದಿನವನ್ನು ಆಚರಿಸಲಾಗುವುದು ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಐಕಳ ಬಾವ ಚಿತ್ತರಂಜನ್‌ದಾಸ್ ಶೆಟ್ಟಿ ತಿಳಿಸಿದ್ದಾರೆ.
ತುಳ ಭಾಷೆಯನ್ನು ಒಂದು ಕೋಟಿಗಿಂತಲೂ ಅಧಿಕ ಮಂದಿ ಮಾತನಾಡುತ್ತಿದ್ದರೂ ಇನ್ನೂ ರಾಜ್ಯದ ಅಧಿಕೃತ ಭಾಷೆಯಾಗಿಲ್ಲ, ಇದುವರೆಗೆ ಸಂವಿಧಾನದ ಎಂಟನೆ ಪರಿಚ್ಛೇಧಕ್ಕೆ ಸೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಕರಾಳ ದಿನಾಚರಣೆಗೆ ನಿರ್ಧರಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.