ಕೇರಳ ಸರಕಾರಕ್ಕೆ ನೂರುದಿನ ವಸ್ತು ಪ್ರದರ್ಶನದ ಸಂಚಾರಿ ಬಸ್ ಪರ್ಯಟನೆ
Update: 2016-10-20 23:52 IST
ಕಾಸರಗೋಡು, ಅ.20: ರಾಜ್ಯ ಸರಕಾರದ ನೂರು ದಿನದಂಗವಾಗಿ ವಾರ್ತಾ ಇಲಾಖೆ ಆಯೋಜಿಸಿರುವ ವಸ್ತು ಪ್ರದರ್ಶನದ ಸಂಚಾರಿ ಬಸ್ ಗುರುವಾರ ಕಾಸರಗೋಡಿನಿಂದ ಪ್ರಯಾಣ ಬೆಳೆಸಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕೆ.ಜೀವನ್ ಬಾಬು ಸಂಚಾರಿ ಬಸ್‌ಗೆ ಚಾಲನೆ ನೀಡಿದರು. ಜಿಲ್ಲಾ ವಾರ್ತಾಧಿಕಾರಿ ಸುಗತನ್ ಇ.ವಿ. ಉಪಸ್ಥಿತರಿದ್ದರು.
ಕಾಸರಗೋಡು, ಕುಂಬಳೆ, ಹೊಸಂಗಡಿ, ಬದಿಯಡ್ಕ, ಚೆರ್ಕಳ ಮೊದಲಾದೆಡೆಗಳಲ್ಲಿ ಇಂದು ಪಯಣ ಬೆಳೆಸಿದ ಬಸ್ ಶುಕ್ರವಾರದಂದು ಚಟ್ಟಂಚಾಲ್, ಮಾಂಗಾಡ್, ಪಾಲಕುನ್ನು, ಪಳ್ಳಿಕೆರೆ, ವೆಳ್ಳಿಕೋತ್ ಮೊದಲಾದೆಡೆಗಳಲ್ಲಿ ಪರ್ಯಟನೆ ನಡೆಸಲಿದೆ.