×
Ad

ಮೊಸುಲ್: ನಿರೀಕ್ಷೆಗಿಂತ ಹೆಚ್ಚಿನ ವೇಗದಲ್ಲಿ ಪಡೆಗಳ ಮುನ್ನಡೆ: ಇರಾಕ್ ಪ್ರಧಾನಿ

Update: 2016-10-20 23:57 IST

ಪ್ಯಾರಿಸ್, ಅ. 20: ಐಸಿಸ್ ಭಯೋತ್ಪಾದಕರಿಂದ ಮೊಸುಲ್ ನಗರವನ್ನು ಮರುಸ್ವಾಧೀನಪಡಿಸಿಕೊಳ್ಳುವ ನಿಟ್ಟಿನಲ್ಲಿ ಇರಾಕ್ ಪಡೆಗಳು ನಿರೀಕ್ಷೆಗಿಂತ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತಿವೆ ಎಂದು ಇರಾಕ್ ಪ್ರಧಾನಿ ಹೈದರ್ ಅಲ್-ಅಬಾದಿ ಗುರುವಾರ ತಿಳಿಸಿದ್ದಾರೆ.
ಮೊಸುಲ್‌ನ ಭವಿಷ್ಯಕ್ಕೆ ಸಂಬಂಧಿಸಿ ಫ್ರಾನ್ಸ್ ಮತ್ತು ಇರಾಕ್ ಜೊತೆಯಾಗಿ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ಅವರು ಮಾತನಾಡುತ್ತಿದ್ದರು. ‘‘ಭಯೋತ್ಪಾದಕರು ಈಗಾಗಲೇ ನೆರೆಯ ಸಿರಿಯದ ರಖದಲ್ಲಿರುವ ತಮ್ಮ ಭದ್ರಕೋಟೆಗೆ ಪಲಾಯನ ಮಾಡಲು ಆರಂಭಿಸಿದ್ದಾರೆ’’ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಇದೇ ಸಂದರ್ಭದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News