×
Ad

ತಿಂಡಿಪೋತ ಮಗಳು: ಅಡುಗೆಕೋಣೆಗೆ 5 ಬಾಗಿಲು ಹಾಕಿದ ಅಮ್ಮ!

Update: 2016-10-21 12:05 IST

ಮ್ಯಾಂಚೆಸ್ಟರ್, ಅಕ್ಟೋಬರ್ 21: ಐದು ವಯಸ್ಸಿನ ಮಗಳಿಗೆ ತಗಲಿರುವ ಹಸಿವು ರೋಗದಿಂದ ಕಂಗಾಲಾದ ತಾಯಿಯೋರ್ವರು ಮಗಳಕೈಗೆ ಆಹಾರವಸ್ತು ಸಿಗದಂತೆ ಬಿಗುಭದ್ರತೆ ಏರ್ಪಡಿಸಿದ್ದಾರೆ. ಇಂಗ್ಲೆಂಡ್‌ನ ಮೋಲಿ ಬೈವಾಟರ್ ಎಂಬ ಬಾಲಕಿಗೆ ಪ್ರಾಡರ್ ವಿಲ್ಲಿ ಸಿಂಡ್ರೋಮ್ ಎಂಬ ತಿಂಡಿಪೋತ ರೋಗವಿದ್ದು, ಎಷ್ಟು ತಿಂದರೂ ಸಾಲುವುದಿಲ್ಲ. ಹೊಟ್ಟೆತುಂಬುವುದಿಲ್ಲ. ಆದ್ದರಿಂದ ಈ ರೋಗದಿಂದ ಮಗುವನ್ನು ರಕ್ಷಿಸಲು ಬೇರೆ ಉಪಾಯವಿಲ್ಲದೆ ಮಗುವಿಗೆ ತಿಂಡಿ ಸಿಗದಂತೆ ಮಾಡುವ ಉಪಾಯವಾಗಿ ಈ ತಾಯಿ ಅಡುಗೆ ಕೋಣೆಗೆ ಐದುವಿಶೇಷ ಬಾಗಿಲುಗಳನ್ನು ಮಾಡಿಸಿದ್ದಾರೆಂದು ವರದಿಯಾಗಿದೆ.

ಮಗು ಸಿಕ್ಕಿದ್ದೆಲ್ಲವನ್ನೂ ತಿನ್ನುತ್ತಿದೆ. ಒಂದು ವೇಳೆ ತಾನು ಅಡುಗೆಕೋಣೆ ಬಾಗಿಲುಮುಚ್ಚಲು ಮರೆತು ಬಿಟ್ಟರೆ ಎಂದು ತಾಯಿ ಜೋ ಈ ಎಚ್ಚರಿಕೆಯನ್ನು ವಹಿಸಿದ್ದಾರೆ. ವೈದ್ಯರು ಮಗುವಿಗೆ ಆಹಾರ ನೀಡುವುದನ್ನು ನಿಯಂತ್ರಿಸಬೇಕು ಎಂದು ಕಟು ಎಚ್ಚರಿಕೆ ನೀಡಿದ್ದು, ಈಗಲೆ ಮಗುವಿನ ತೂಕ ಅತಿಯಾಗಿದೆ. ಬೆಳಗ್ಗಿನ ಆಹಾರವನ್ನು ಆಕೆ ರಾತ್ರೆ ಎರಡು ಗಂಟೆಗೆ ಕೇಳುತ್ತಾಳೆ ಎಂದು ತಾಯಿ ಹೇಳುತ್ತಾರೆ. ಮಗುವಿಗೆ ಮೂರು ವಾರ ವಯಸ್ಸಿದ್ದಾಗ ವೈದ್ಯರು ರೋಗವನ್ನು ಗುರುತಿಸಿದ್ದರು. ಪೀಟರ್‌ಬರ್ಗ್‌ ಸಿಟಿ ಹಾಸ್ಪಿಟಲ್, ನಂತರ ಕೇಂರಿಡ್ಜ್‌ನ ಇನ್ನೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಮಗುವಿಗೆ ರಾಯಲ್ ಮ್ಯಾಂಚೆಸ್ಟರ್‌ನ ಚಿಲ್ಡ್ರನ್ಸ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News