ಮರಳು ಅಕ್ರಮ ಸಾಗಾಟ: ಮೂರು ಲಾರಿಗಳು ವಶ
Update: 2016-10-21 16:28 IST
ಕೊಣಾಜೆ, ಅ.21: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಕಂದಾಯ ಇಲಾಖೆಯವರು ವಶಪಡಿಸಿಕೊಂಡ ಘಟನೆ ದೇರಳಕಟ್ಟೆ ಮತ್ತು ಕೊಣಾಜೆಯಲ್ಲಿಂದು ನಡೆದಿದೆ.
ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ದೇರಳಕಟ್ಟೆ ಮತ್ತು ಕೊಣಾಜೆಯಲ್ಲಿ ಇಂದು ಬೆಳಗ್ಗೆ ಕಂದಾಯ ಇಲಾಖೆಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಮಂಗಳೂರು ಎಸಿ ಡಾ.ಅಶೋಕ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಲಾರಿ ಮತ್ತು ಮರಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.