×
Ad

ಕಾಟಿಪಳ್ಳ: ಬಡ ನಿರ್ಗತಿಕರಿಗೆ ಸಹಾಯ ನೀಡುವ 'ಸಾಂತ್ವಾನ ಯೋಜನೆ' ಉಧ್ಘಾಟನೆ

Update: 2016-10-21 17:04 IST

ಕಾಟಿಪಳ್ಳ,ಅ.21:ಪಣಂಬೂರು ಮುಸ್ಲಿಂ ಜಮಾಅತ್ ಕಾಟಿಪಳ್ಳ ಇದರ ಆಶ್ರಯದಲ್ಲಿ ಕೈ ಗೊಂಡ ಊರಿನ ಬಡ ನಿರ್ಗತಿಕರಿಗೆ ಸಹಾಯ ನೀಡುವ "ಸಾಂತ್ವಾನ ಯೋಜನೆ"ಯ ಉಧ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಬಹು|ಅಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಕುತ್ತಾರ್ ಇವರ ದಿವ್ಯ ಹಸ್ತದಿಂದ ಊರಿನ ಬಡ ಕುಟುಂಬವೊಂದರ ಹೆಣ್ಣಿನ ಮದುವೆಗೆ 1ಲಕ್ಷಕ್ಕೂ ಮಿಕ್ಕ ಬೆಲೆಯ ಚಿನ್ನಾಭರಣ ನೀಡುವುದರೊಂದಿಗೆ  ಚಾಲನೆ ನೀಡಲಾಯ್ತು.

ಈ ಸಂಧರ್ಭ ಸ್ಥಳೀಯ ಖತೀಬ್ ವಿ.ಯು.ಅಬ್ದುನ್ನಾಸಿರ್ ಮದನಿ, ಜಮಾಅತ್ ಅಧ್ಯಕ್ಷರು ಪಿ.ಎಂ.ಸಲೀಂ ರಫೀ, ಕಾರ್ಯದರ್ಶಿ ಬಿ.ಯೂಸುಫ್, ಕೋಶಾಧಿಕಾರಿ ಬಿ.ಅಬೂಬಕ್ಕರ್ ಹಾಗೂ ಪಧಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News