×
Ad

ಮಂಗಳೂರು ವಿವಿ ವಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ : ಉಜಿರೆಯ ಎಸ್‌ಡಿಎಂ ಕಾಲೇಜು ತಂಡಕ್ಕೆ ಪ್ರಶಸ್ತಿ

Update: 2016-10-21 17:48 IST

ಸುಳ್ಯ,ಅ.21: ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ವಲಯ ಮಟ್ಟದ ಪಠೇಲ್ ಸೌಕೂರು ಅಂತಯ್ಯ ಶೆಟ್ಟಿ ಸ್ಮಾರಕ ರೋಲಿಂಗ್ ಟ್ರೋಫಿ ಅಂತರ್ ಕಾಲೇಜು ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ತಂಡ ಪ್ರಶಸ್ತಿ ಗಳಿಸಿದೆ.

ಒಟ್ಟು 18 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದು, ಆತಿಥೇಯ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ರನ್ನರ್ ಅಪ್ ಗಳಿಸಿದೆ. ಫೈನಲ್ ಪಂದ್ಯದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜು ತಂಡ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡವನ್ನು 25-12, 25-18 ನೇರ ಸೆಟ್‌ಗಳಿಂದ ಪರಾಭವಗೊಳಿಸಿತು. ಮಂಗಳೂರಿನ ಶಾರದಾ ಕಾಲೇಜು ತಂಡ ತೃತೀಯ ಹಾಗೂ ಮೂರ್ನಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತಂಡ ನಾಲ್ಕನೇ ಬಹುಮಾನ ಗಳಿಸಿತು. ಬೆಸ್ಟ್ ಲಿಬ್ರೋ ಆಗಿ ಎಸ್‌ಡಿಎಂ ಕಾಲೇಜಿ ಚೇತನ್, ಬೆಸ್ಟ್ ಸೆಟ್ಟರ್ ಆಗಿ ಎಸ್‌ಡಿಎಂ ಕಾಲೇಜಿನ ವರಣ್, ಬೆಸ್ಟ್ ಆಲ್‌ರೈಂಡರ್ ಆಗಿ ಎಸ್‌ಡಿಎಂನ ರಾಕೇಶ್, ಬೆಸ್ಟ್ ಎಟೇಕರ್ ಆಗಿ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿಷೇಕ್ ಪ್ರಶಸ್ತಿ ಪಡೆದರು. ಮಂಗಳೂರು ಹಾಗೂ ಉಡುಪಿ ವಲಯಗಳನ್ನಾಗಿ ವಿಮಗಡಿಸಿ ವಾಲಿಬಾಲ್ ಪಂದ್ಯಾಟವನ್ನು ನಡೆಸಲಾಗುತ್ತಿದ್ದು, ವಲಯ ಮಟ್ಟದಲ್ಲಿ ಪ್ರಥಮ ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದ ತಂಡಗಳು ವಿವಿ ವಾಲಿಬಾಲ್ ಪಂದ್ಯಾಟದಲ್ಲಿ ಸ್ಪರ್ಧಿಸಲಿವೆ.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಕೆ.ಪದ್ಮನಾಭ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಾಧಾಕೃಷ್ಣ ಮಾಣಿಬೆಟ್ಟು, ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್‌ನ ಕಾರ್ಯದರ್ಶಿ ಗೋಕುಲ್‌ದಾಸ್, ಸುಲ್ಯ ತಾಲೂಕು ವಾಳಿಬಲ್ ಎಸೋಸಿಯೇಶನ್‌ನ ಅಧ್ಯಕ್ಷ ಎಸ್.ಸಂಶುದ್ದೀನ್, ವಿವಿ ಕ್ರೀಡಾ ನಿರ್ದೇಶಕ ಡಾ.ಕೇಶವಮೂರ್ತಿ, ವಿವಿ ದೈಹಿಕ ಶಿ8ಕ್ಷಣ ನಿರ್ದೇಶಕ ಡಾ.ಸಿ.ಕೆ.ಕಿಶೋರ್ ಕುಮಾರ್, ಸಿಡಿಸಿ ನಿರ್ದೇಶಕ ಜಯರಾಜ್ ಅಮೀನ್, ಅಮೃತಸರದ ಗುರುನಾನಕ್ ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ಎಚ್.ಎಸ್.ರಾಮದೇವ್ ಅತಿಥಿಗಳಾಗಿದ್ದರು.

ಪ್ರಾಧ್ಯಾಪಕ ಅಚ್ಚುತ ಪೂಜಾರಿ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಸತೀಶ್ ಕೊಯಿಂಗಾಜೆ ವಂದಿಸಿದರು. ಮನಮೋಹನ ಬಳ್ಳಡ್ಕ ಮತ್ತು ಸತೀಶ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News