×
Ad

ತಾಲೂಕು ಕಚೇರಿ ಮೊಗಸಾಲೆ ಗೋಡೆಯಲ್ಲಿ ಆಕರ್ಷಕ ಚಿತ್ತಾರ !

Update: 2016-10-21 18:17 IST

ಸುಳ್ಯ,ಅ.21: ಸುಳ್ಯ ತಾಲೂಕು ಕಚೇರಿಯ ಹಳೆಯ ಕಟ್ಟಡದ ಮೊಗಸಾಲೆಯ ಗೋಡೆಯಲ್ಲಿ ಬೇರಿನ ಆಕರ್ಷಕ ಚಿತ್ತಾರ ಮೂಡಿಬಂದಿದ್ದು, ಆಗಮಿಸುವ ಸಾರ್ವಜನಿಕರನ್ನು ಸ್ವಾಗತಿಸುತ್ತಿದೆ. ಇದೇನು ಸ್ವಾಗತಕ್ಕಾಗಿ ಹಾಕಿದ ಚಿತ್ತಾರವಲ್ಲ!, ಗೋಡೆಯ ಹೊರಗಿನ ಸನ್‌ಶೇಡ್‌ನಲ್ಲಿ ಬೆಳೆದಿರುವ ಪೊದೆಯೊಂದರ ಬೇರು ಗೋಡೆ ಕೊರೆದು ಒಳಕ್ಕೆ ನುಗ್ಗಿದ್ದು, ಮೊಗಸಾಲೆಯ ಎದುರಿನ ಗೋಡೆಯ ಒಳಭಾಗದಲ್ಲಿ ಆಕರ್ಷಕ ಚಿತ್ತಾರ ಬಿಡಿಸಿದೆ. ಮಳೆ ಕಡಿಮೆಯಾಗಿದ್ದರಿಂದ ಬೇರಿನ ಚಿತ್ತಾರ ಆಕರ್ಷಕವಾಗಿ ಕಾಣುತ್ತಿದೆ. ವಿದ್ಯುತ್ ಸಂಪರ್ಕದ ನಿಯಂತ್ರಣ ಘಟಕವೂ ಇಲ್ಲೇ ಇರುವುದರಿಂದ ಅದರ ಬಳಿಯೂ ಜಡೆಯಂತೆ ಬೇರು ಇಳಿ ಬಿದ್ದಿದೆ. ಕಚೇರಿಗೆ ಆಗಮಿಸುವಲ್ಲಿ ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಅಧಿಕಾರಿಗಳಿಗಾಗಲೀ, ಸಿಬ್ಬಂದಿ ವರ್ಗಕ್ಕಾಗಲಿ ಇದರ ಕುರಿತು ಗಮನವೇ ಇದ್ದಂತಿಲ್ಲ. ಬೇರು ಒಳ ನುಗ್ಗಿದ್ದರಿಂದ ಗೋಡೆಯೂ ಬಿರುಕು ಬಿಟ್ಟಿದ್ದು, ಸುಭದ್ರವಾಗಿರುವ ಹಳೆಯ ಕಾಲದ ಕಟ್ಟಡ ಶಿಥಿಲದತ್ತ ಸಾಗುತ್ತಿದೆ ಎಂದು ನಾಗರಿಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News