ಸುರತ್ಕಲ್- ಎಂಆರ್‌ಪಿಎಲ್ ರಸ್ತೆ ತುರ್ತು ದುರಸ್ತಿ : 1 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಂಸದ ನಳಿನ್ ಸೂಚನೆ

Update: 2016-10-21 13:09 GMT

ಮಂಗಳೂರು, ಅ.21: ಸುರತ್ಕಲ್-ಎಂಆರ್‌ಪಿಎಲ್-ಕಾನ ರಸ್ತೆಯನ್ನು ದುರಸ್ತಿ ಕಾರ್ಯದ ವೆಚ್ಚವನ್ನು ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ವಿವಿಧ ಕಂಪನಿಗಳು ಭರಿಸಿಕೊಂಡು ಕೂಡಲೇ ಕಾಮಗಾರಿಗೆ ಕ್ರಮ ಕೈಗೊಂಡು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.

ಅವರು ಇಂದು ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ಸುರತ್ಕಲ್-ಎಂಆರ್‌ಪಿಎಲ್ ರಸ್ತೆ ದುರಸ್ತಿಗೆೆ ಸಂಬಂಸಿ ಅಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು.

ತಾತ್ಕಾಲಿಕವಾಗಿ ಈ ರಸ್ತೆಯನ್ನು ದುರಸ್ತಿಪಡಿಸಲು ಒಟ್ಟು 1.50 ಕೋಟಿ ರೂ. ಅಗತ್ಯವಿದೆ. ಈ ಮೊತ್ತವನ್ನು ತಕ್ಷಣಕ್ಕೆ ಸರ್ಕಾರದಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಶೇ.30 ಹಾಗೂ ಹಾಗೂ ಅಲ್ಲಿರುವ ವಿವಿಧ ಕೈಗಾರಿಕಾ ಕಂಪನಿಗಳು ಶೇ.70 ಅಂದರೆ ಕಾಮಗಾರಿಗೆ ಅಗತ್ಯವಾದ ಮೊತ್ತವನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಅದರಂತೆ ಎಚ್‌ಪಿಸಿಎಲ್, ಬಿಎಎಸ್‌ಎ್, ಎಂಆರ್‌ಪಿಎಲ್, ಬಿಪಿಸಿಎಲ್ ಕಂಪನಿಗಳು ತಲಾ 20 ಲಕ್ಷ ನೀಡಬೇಕು. ಎಂಸಿಎ್ 15 ಲಕ್ಷ ರೂ. ಹಾಗೂ ಮಹಾನಗರ ಪಾಲಿಕೆ 45 ಲಕ್ಷ ಬಳಸಿಕೊಂಡು ಕೂಡಲೇ ಕಾಮಗಾರಿಗೆ ಟೆಂಡರ್ ಕರೆಯಬೇಕು. ಬಳಿಕ ರಸ್ತೆಯನ್ನು ಎರಡು ವರ್ಷ ಪಾಲಿಕೆಯೇ ನಿರ್ವಹಣೆ ಮಾಡಬೇಕು. ಅಲ್ಲದೆ ಮೂರನೇ ತಂಡದಿಂದ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲನೆ ಮಾಡಿಸಬೇಕು ಎಂದು ಸಂಸದ ನಳಿನ್ ಕುಮಾರ್ ನಿರ್ದೇಶಿಸಿದರು.

ಈ ರಸ್ತೆಯ ಪೂರ್ಣ ಕಾಂಕ್ರಿಟಿಕರಣಕ್ಕೆ 52 ಕೋಟಿ ಬೇಕಾಗುತ್ತದೆ. ಅಷ್ಟೊಂದು ಮೊತ್ತವನ್ನು ಹೊಂದಿಸುವುದು ಸುಲಭವಲ್ಲ. ಸರ್ಕಾರ ಅನುಮೋದನೆ ನೀಡಿದ ಬಳಿಕ ಕಾಮಗಾರಿ ಆರಂಭವಾಗಲು ಬಹಳ ವರ್ಷ ಬೇಕಾಗಬಹುದು. ಈ ರಸ್ತೆಯಲ್ಲಿ ಕೈಗಾರಿಕಾ ಕಂಪನಿಗಳ ಟ್ಯಾಂಕರ್‌ಗಳು ಹಾಗೂ ಬೃಹತ್ ಸರಕು ವಾಹನಗಳು ಸಂಚರಿಸುವುದರಿಂದ ಟೋಲ್ ಸಂಗ್ರಹ ಮಾಡಬಹುದು ಎಂದು ಅವರು ಈ ಸಂದರ್ಭ ಸಲಹೆ ನೀಡಿದರು.

ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ ಮಾತನಾಡಿ, ಈ ರಸ್ತೆಯ ಅಭಿವೃದ್ಧಿಗೆ ಸರ್ವೆ ಕಾರ್ಯ ನಡೆಯುತ್ತಿದೆ. ರಾಜ್ಯ ಹೆದ್ದಾರಿ ಹಾಗೂ ವಿಮಾನ ನಿಲ್ದಾಣ ಸಮಿತಿಗಳ ನೆರವನ್ನು ಪಡೆದುಕೊಳ್ಳಲಾಗುವುದು ಎಂದರು.

ತುಂಬೆಯ ಹೊಸ ಕಿಂಡಿಅಣೆಕಟ್ಟೆಯ ಕಾಮಗಾರಿ ಮುಕ್ತಾಯಗೊಂಡಿದೆ. ಇದೇ ಡಿಸೆಂಬರ್‌ನಿಂದ ನೀರು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಇದರಿಂದ ಈ ಬಾರಿ ಬೇಸಿಗೆಯಲ್ಲಿ ಮಂಗಳೂರಿಗೆ ನೀರಿನ ಕೊರತೆ ತಲೆದೋರದು ಎಂದು ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ತಿಳಿಸಿದರು.

ಮೇಯರ್ ಹರಿನಾಥ್, ಉಪ ಮೇಯರ್ ಸುಮಿತ್ರಾ ಕರಿಯ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News