×
Ad

ಜಿಲ್ಲೆಯ ಮೀನುಗಾರಿಕಾ ವಲಯದ ಸಮಸ್ಯೆಗಳ ಬಗ್ಗೆ ಸಚಿವೆ ಜೆ. ಮೆರ್ಸಿ ಕುಟ್ಟಿ ಯಮ್ಮ ರವರ ನೇತೃತ್ವದಲ್ಲಿ ಸಭೆ

Update: 2016-10-21 20:01 IST

ಕಾಸರಗೋಡು,ಅ.21:  ಜಿಲ್ಲೆಯ ಮೀನುಗಾರಿಕಾ ವಲಯದ ಸಮಸ್ಯೆಗಳ ಬಗ್ಗೆ  ರಾಜ್ಯ ಮೀನುಗಾರಿಕಾ ಸಚಿವೆ ಜೆ. ಮೆರ್ಸಿ ಕುಟ್ಟಿ ಯಮ್ಮ ರವರ ನೇತೃತ್ವದಲ್ಲಿ ಶುಕ್ರವಾರ  ಕಾಞ೦ಗಾಡ್  ಅತಿಥಿಗ್ರಹದಲ್ಲಿ    ಅವಲೋಕನ ನಡೆಸಿದರು.

ಮೀನುಗಾರಿಕಾ , ಮತ್ಸ್ಯಫೆಡ್ , ಕರಾವಳಿ ಅಭಿವೃದ್ಧಿ ನಿಗಮ , ಬಂದರು ಇಂಜಿನೀಯರಿಂಗ್ , ಮೀನುಗಾರಿಕಾ ಕಲ್ಯಾಣ ನಿಧಿ  ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೀಯೂರಿನಲ್ಲಿ ಮರೈನ್  ಎನ್ ಪೋರ್ಸ್ ಮೆಂಟ್  ಸೇರಿದಂತೆ ಕರಾವಳಿ ಪೊಲೀಸ್ ಠಾಣೆ ಜನವರಿಯಲ್ಲಿ ಆರಂಭಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು.

ಭೂರಹಿತ ಮತ್ಸ್ಯ ಕಾರ್ಮಿಕರಿಗೆ  ಭೂಮಿ ನೀಡಲಾಗುವುದು.  ಎಲ್ಲಾ ಅರ್ಹ  ಬೆಸ್ತರಿಗೂ ಸೀಮೆ ಎಣ್ಣೆ  ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.  ಬೆಸ್ತರ ಸಂರಕ್ಷಣೆ ಗೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು. ಕಾಸರಗೋಡು ಮೀನು ಮಾರುಕಟ್ಟೆ  ಸಮಸ್ಯೆ ಬಗ್ಗೆ  ವರದಿ ನೀಡಲು  ಮೀನುಗಾರಿಕಾ ನಿರ್ದೇಶಕರಿಗೆ ಸಚಿವರು ಆದೇಶ ನೀಡಿದರು.

  ಸಭೆಯಲ್ಲಿ  ಮೀನುಗಾರಿಕಾ ಇಲಾಖಾ ಅಧಿಕಾರಿಗಳಾದ ಪಿ .ಕೆ  ಅನಿಲ್ ಕುಮಾರ್ , ಡಾ . ದಿನೇಶ್ , ಜಯನಾರಾಯಣ , ಕೆ . ವನಜ , ಪಿ .ಕೆ ಸುರೇಂದ್ರನ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News