×
Ad

ಸಂಸ್ಥೆಯ ಏಳಿಗೆಗೆ ಸಮರ್ಥ ನಾಯಕತ್ವ ಮುಖ್ಯ : (ಪ್ರೊ)ಕುಲಪತಿ ಡಾ.ಶಾಂತಾರಾಮ ಶೆಟ್ಟಿ

Update: 2016-10-21 20:15 IST

 ಮಂಗಳೂರು,ಅ.21:ಸಂಸ್ಥೆಯ ಏಳಿಗೆಗೆ ಸಮರ್ಥ ನಾಯಕತ್ವ ಮುಖ್ಯ ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ (ಪ್ರೊ)ಕುಲಪತಿ ಡಾ.ಶಾಂತಾರಾಮ ಶೆಟ್ಟಿ ತಿಳಿಸಿದರು.

     ಅವರು ಇಂದು ನಗರದ ಲೈಟ್ ಹೌಸ್‌ಹಿಲ್‌ರಸ್ತೆಯ ಬಳಿ ಇರುವ ವಿಜಯ ಬ್ಯಾಂಕ್ ಸ್ಥಾಪಕ ರ ಶಾಖೆಯ ಸಭಾಂಗಣದಲ್ಲಿ ವಿಜಯ ಬ್ಯಾಂಕ್‌ನ 86ನೆ ಸಂಸ್ಥಾಪನಾ ದಿನದ ಅಂಗವಾಗಿ ಹಮ್ಮಿಕೊಂಡ ಮುಲ್ಕಿ ಸುಂದರಾಮ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

    ವಿಜಯ ಬ್ಯಾಂಕ್ ಸ್ಥಾಪನೆಯ ಬಳಿಕ ಮುಲ್ಕಿ ಸುಂದರಾಮ ಶೆಟ್ಟಿ ಬ್ಯಾಂಕಿನ ನೇತೃತ್ವ ವಹಿಸಿಕೊಂಡ ಬಳಿಕ ಬ್ಯಾಂಕಿನ ಪ್ರಗತಿಯನ್ನು ಗಮನಿಸಿದಾಗ ಅವರು ಒಂದು ಸಂಸ್ಥೆಗೆ ಸಮರ್ಥ ನಾಯಕತ್ವ ಹೇಗಿರಬೇಕು ಎಂದು ತೋರಿಸಿಕೊಟ್ಟವರಾಗಿದ್ದಾರೆ.ಓರ್ವ ನಾಯಕ ತನ್ನ ನಾಯಕತ್ವದಿಮದ ಯಶಸ್ಸು ಸಾಧಿಸಬೇಕಾದರೆ ಆತನೊಂದಿಗೆ ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವ ಸಂಘಟಿತ ತಂಡದ ಪ್ರಯತ್ನ ಮುಖ್ಯ ಆಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಶಾಂತರಾಮ ಶೆಟ್ಟಿ ತಿಳಿಸಿದರು.ಭಾರತ ಸ್ವಾತಂತ್ರ ಗಳಿಸಿದ ಬಳಿಕ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ ಆದರೆ ಸ್ವಾತಂತ್ರದ ಮಹತ್ವವನ್ನು ಅರಿತ ಜನವರ್ಗಕಡಿಮೆ ಯಾಗಿರುವುದು,ದೇಶದಲ್ಲಿ ಸ್ವಜನ ಪಕ್ಷಪಾತ ,ಶಿಕ್ಷಣದ ಕೊರತೆ ಭೃಷ್ಟಾಚಾರದ ಬೆಳವಣಿಗೆ,ಸಮರ್ಥ ನಾಯತ್ವದ ಕೊರತೆ ನಿರೀಕ್ಷಿತವಾದ ಪ್ರಗತಿ ಸಾಧಿಸಲು ಅಡ್ಡಿಯಾಗಿದೆ. ವಿಜಯ ಬ್ಯಾಂಕ್ ಪ್ರಸಕ್ತ ದೇಶಾದ್ಯಂತ ತನ್ನ ಶಾಖೆಗಳನ್ನುವಿಸ್ತರಿಸಲು ಹಾಗೂ ಕೋಟ್ಯಾಂತರ ರೂಪಾಯಿಗಳ ಆರ್ಥಿಕ ವ್ಯವಹಾರ ನಡೆಸಲು ಕಾರಣವಾಗಿರುವುದು ಮುಲ್ಕಿ ಸುಂದರರಾಮ ಶೆಟ್ಟಿಯವರ ದೂರದೃಷ್ಟಿಯ ಫಲವಾಗಿದೆ ಎಂದು ಶಾಂತಾರಾಮ ಶೆಟ್ಟಿ ತಿಳಿಸಿದರು.

 ಉತ್ತಮ ನಾಯಕರಾಗಲು ಆತನಲ್ಲಿ ಉನ್ನತ ಗುರಿ,ಕನಸುಗಳಿರಬೇಕು ಆ ಗುರಿ ಸಾಧಿಸಲು ಬೇಕಾದ ಪರಿಶ್ರಮ ,ತಾಳ್ಮೆ ಇರಬೇಕು.ವಿಜಯ ಬ್ಯಾಂಕ್‌ನ ಮುಲ್ಕಿ ಸುಂದರಾಮ ಶೆಟ್ಟಿಯವರು ನಾಯಕತ್ವ ಅಂದರೆ ಏನು?ಹೇಗಿರಬೇಕು ಎಂದು ಎಲ್ಲೂ ಹೇಳಲು ಹೋಗದೆ.ತಮ್ಮ ಬದುಕಿನಲ್ಲಿ ಉತ್ತಮ ನಾಯಕ ಹೇಗಿರಬೇಕು ಎಂದು ಮಾಡಿ ತೋರಿಸಿಕೊಟ್ಟಿದ್ದಾರೆ.ಬ್ಯಾಂಕುಗಳು ಗ್ರಾಹಕರೊಂದಿಗೆ ಎಷ್ಟು ಉತ್ತಮ ರೀತಿಯ ಸಂಬಂಧ ಹೊಂದಿರುತ್ತವೆ ಆ ಮೂಲಕ ಗ್ರಾಹಕನಿಗೂ ಬ್ಯಾಂಕಿಗೂ ಒಳಿತಾಗುತ್ತದೆ ಎಂದು ಶಾಂತಾರಾಮ ಶೆಟ್ಟಿ ತಿಳಿಸಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಿಜಯ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿಜಿಎಂ ಕೆ.ಸುರೇಂದ್ರ ಹೆಗ್ಡೆ ವಿಜಯ ಬ್ಯಾಂಕಿನ ಸ್ಥಾಪನೆ ,ಬೆಳವಣಿಗೆಯ ಬಗ್ಗೆ ವಿವರಿಸಿದರು.ಸಮಾರಂಭದ ವೇದಿಕೆಯಲ್ಲಿ ಎಜಿಎಂ ವಸಂತ ರಾಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News