ಬಾವಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ
Update: 2016-10-21 21:53 IST
ಬ್ರಹ್ಮಾವರ, ಅ.21: ಹೇರೂರು ಗ್ರಾಮದ ದೂಪದಕಟ್ಟೆ ಬಳಿಯ ಕರುಣಾ ಲಯ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಆರುಳ್ ಸೆಲ್ವಿ(35) ಎಂಬ ವರು ಆ.21ರಂದು ಬೆಳಗಿನ ಜಾವ ಆಶ್ರಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಇವರು ಬ್ರಹ್ಮಾವರ ನಿರ್ಮಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅರೆಕಾಲಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ಸುಮಾರು ಒಂದು ವರ್ಷದ ಹಿಂದೆ ಮೂಲ ವ್ಯಾಧಿ ಕಾಯಿಲೆಗೆ ಶಸ್ತ್ರ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿದ್ದರು. ಇಂದು ಬೆಳಗಿನ ಉಪಾಹಾರ ಮಾಡಿ ಆಶ್ರಮ ಹೊರಗೆ ಹೋದವರು ಆಶ್ರಮದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರ ತಂದೆ ತಾಯಿ ಇಬ್ಬರೇ ಊರಿನಲ್ಲಿ ವಾಸವಿದ್ದು ಅವರ ಬಗ್ಗೆ ಅಗಾಗ ಚಿಂತಿಸುತ್ತಿದ್ದು, ಇದೇ ಅಥವಾ ಬೇರೆ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.