ಆಚಾರ ವಿಚಾರವಿಲ್ಲದೆ ಪರರ ದೂಷಿಸುವ ಬಿಜೆಪಿ: ಕಾಂಗ್ರೆಸ್
ಉಡುಪಿ, ಅ.21: ಸಚಿವ ಪ್ರಮೋದ್ ಮಧ್ವರಾಜ್ ಅವರು ರಾಮ, ಕೃಷ್ಣ ಹಾಗೂ ವಾಲ್ಮೀಕಿ ಮಾಂಸಾಹಾರಿಗಳು ಎಂದು ಹೇಳಿರುವುದನ್ನು ದೊಡ್ಡ ವಿಷಯವನ್ನಾಗಿ ಮಾಡಿ ಕೊಂಡು ಜನರ ಮನದಲ್ಲಿ ಬಿಜೆಪಿಯವರು ಮಾತ್ರ ದೈವ ಭಕ್ತರು ಎಂದು ಬಿಂಬಿಸುವ ಕೆಲಸದಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಯಾವುದೇ ದೇವರನ್ನು ಬಳಸಿಕೊಂಡು ಮತ ಗಿಟ್ಟಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಬ್ರಾಹ್ಮಣರು ಮಾಂಸ ತಿನ್ನಬಾರದೆಂದು ಹೇಳಿದ್ದಾರೆ. ರಘುಪತಿ ಭಟ್ಟರೇ ನೀವು ಬ್ರಾಹ್ಮಣರಲ್ಲವೇ? ಎಂದು ಪ್ರಶ್ನಿಸಿ ರುವ ಅವರು, ಚೈತ್ರಾ ಸಾವಿನ ಬಗ್ಗೆ ಮಾತನಾಡುವ ಬಿಜೆಪಿಯ ಮುಖಂಡರು ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಸಾವಿನ ಬಗ್ಗೆ ಏಕೆ ಧ್ವನಿ ಎತ್ತಿಲ್ಲ?. ಚೈತ್ರಾ ಆತ್ಮಹತ್ಯೆ ಪ್ರಕರಣದ ಕೆಲವರನ್ನು ಸಚಿವರು ದೂರವಾಣಿ ಮೂಲಕ ಪೋಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿ ಬಿಡುಗಡೆ ಗೊಳಿಸಿರುವುದಾಗಿ ಬಿಜೆಪಿ ಆರೋಪಿಸಿದೆ. ಇದು ಸತ್ಯವಾದರೆ ಸತ್ಯವನ್ನು ಸಾಬೀತುಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.
ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಯವರನ್ನು ದಾಸರ ಕೀರ್ತನೆಯಂತೆ ಸಂಬೋಧಿಸಬೇಕಾಗುತ್ತದೆ. ದೂಷಿಸುವ ಕೆಲಸವನ್ನು ಇನ್ನಾ ದರೂ ಬಿಜೆಪಿಯ ಮುಖಂಡರು ನಿಲ್ಲಿಸಲಿ ಎಂದು ಕಾಂಗ್ರೆಸ್ ಮುಖಂಡ ರಾದ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಸದಾಶಿವ ಕೋಟ್ಯಾನ್ ಕಟ್ಟೆಗುಡ್ಡೆ, ಹಸನ್ ಸಾಹೇಬ್ ಅಜ್ಜರಕಾಡು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.