×
Ad

ಯುವತಿಯನ್ನು ವಸತಿಗೃಹಕ್ಕೆ ಕರೆದ ಯುವಕನ ಸೆರೆ

Update: 2016-10-21 22:53 IST

ಕಾಸರಗೋಡು, ಅ.21: ಪ್ರೇಯಸಿಯ ಸ್ನೇಹಿತೆಗೆ ವ್ಯಾಟ್ಸ್‌ಆಪ್‌ನಲ್ಲಿ ವಿವಸ್ತ್ರ ಫೋಟೊ ಕಳುಹಿಸಿ ವಸತಿಗೃಹಕ್ಕೆ ಆಹ್ವಾನಿಸಿದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

 ಮುಳ್ಳೇರಿಯಾ ಕಾಡಗದ ಶ್ರೀಜಿತ್(28) ಬಂಧಿತನಾದವನು.

 ಕಾಸರಗೋಡು ಹಳೆ ಬಸ್‌ನಿಲ್ದಾಣ ಪರಿಸರದ ವಸತಿಗೃಹದಿಂದ ಈತನನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಲಾಯಿತು.

         ಪ್ರಮುಖ ಮೊಬೈಲ್ ಕಂಪೆನಿಯ ಸಿಬ್ಬಂದಿಯಾಗಿರುವ ಶ್ರೀಜಿತ್ ಐದು ವರ್ಷಗಳಿಂದ ಕಾಸರಗೋಡಿನ ಬ್ಯೂಟಿಶಿಯನ್ ಆಗಿರುವ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ. ಪ್ರೇಯಸಿಯಿಂದ ಆಕೆಯ ಸ್ನೇಹಿತೆಯ ಮೊಬೈಲ್ಪಡೆದ ಪಡೆದ ಈತ ತನ್ನ ವಿವಸ್ತ್ರ ಭಾವಚಿತ್ರವನ್ನು ವ್ಯಾಟ್ಸ್‌ಆಪ್‌ನಲ್ಲಿ ಕಳುಹಿಸಿಕೊಟ್ಟಿದ್ದನು. ಬಳಿಕ ಕಾಸರಗೋಡಿನ ವಸತಿಗೃಹಕ್ಕೆ ಬರುವಂತೆ ತಿಳಿಸಿದ್ದನೆನ್ನಲಾಗಿದೆ. ಪ್ರೇಯಸಿಯ ಸ್ನೇಹಿತೆ ಕಾಸರಗೋಡು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು

    ಪೊಲೀಸರ ನಿರ್ದೇಶನದಂತೆ ಯುವತಿ ಶ್ರೀಜಿತ್‌ನನ್ನು ಸಂಪರ್ಕಿಸಿ ವಸತಿಗೃಹಕ್ಕೆ ಬರುವುದಾಗಿ ಒಪ್ಪಿಕೊಂಡಿದ್ದರು. ಯುವತಿಯ ಮಾತನ್ನು ನಂಬಿ ವಸತಿಗೃಹದಲ್ಲಿ ರೂಮ್ ಪಡೆದ. ಯುವತಿ ನೀಡಿದ ಮಾಹಿತಿಯಂತೆ ಕೆಲವೇ ನಿಮಿಷದಲ್ಲಿ ದಾಳಿ ನಡೆಸಿದ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News