ಟರ್ಕಿ ರೆಡ್ ಕ್ರೆಸೆಂಟ್‌ನಿಂದ ಮೊಸುಲ್‌ಗೆ ನೆರವು

Update: 2016-10-21 18:47 GMT

ಅಂಕಾರ, ಅ. 21: ಇರಾಕ್‌ನ ಮೊಸುಲ್ ನಗರದ ಮೇಲಿನ ನಿಯಂತ್ರಣವನ್ನು ಮತ್ತೆ ಪಡೆಯುವುದಕ್ಕಾಗಿ ಇರಾಕ್ ಸೇನೆ ಐಸಿಸ್ ಭಯೋತ್ಪಾದಕರ ವಿರುದ್ಧ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ಟರ್ಕಿ ರೆಡ್ ಕ್ರೆಸೆಂಟ್ ಉತ್ತರ ಇರಾಕ್‌ಗೆ ಟ್ರಕ್‌ಗಟ್ಟಳೆ ನೆರವು ಸಾಮಗ್ರಿಗಳನ್ನು ಕಳುಹಿಸಿದೆ.
ಯುದ್ಧದಿಂದ ನಿರ್ವಸಿತರಾಗಿರುವ 10,000 ಜನರಿಗೆ ಸಾಕಾಗುವಷ್ಟು ಆಹಾರ ಮತ್ತು ಮಾನವೀಯ ಪೂರೈಕೆಗಳನ್ನು ಕಳುಹಿಸಲಾಗುತ್ತಿದೆ ಎಂದು ಟರ್ಕಿ ರೆಡ್ ಕ್ರೆಸೆಂಟ್‌ನ ಅಧ್ಯಕ್ಷ ಕೆರೆಮ್ ಕಿನಿಕ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News