ಕೊಲ್ನಾಡು ಎಸ್ಕೆಎಸ್ಸೆಸ್ಸೆಫ್ ನಿಂದ ರಾಜ್ಯ ಮಟ್ಟದ ದಫ್ ಸ್ಪರ್ಧಾಕೂಟ
Update: 2016-10-22 10:22 IST
ಮುಲ್ಕಿ, ಅ.22: ಕೊಲ್ನಾಡು ಎಸ್ಕೆಎಸ್ಸೆಸ್ಸೆಫ್‌ನ ಆಶ್ರಯದಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ದಫ್ ಸ್ಪರ್ಧಾಕೂಟವು ಅ.22ರಂದು ರಾತ್ರಿ ಅಲ್ ಖುಬಾ ಜುಮ ಮಸೀದಿಯ ಬಳಿ ರಾತ್ರಿ 7 ಗಂಟೆಗೆ ನಡೆಯಲಿದೆ.
ಸಮಾರಂಭವನ್ನು ಎಸ್ಕೆಎಸ್ಸೆಸ್ಸೆಫ್‌ನ ದ.ಕ. ಜಿಲ್ಲಾಧ್ಯಕ್ಷ ಇಸಾಕ್ ಫೈಝಿ ನೆರವೇರಿಸಲಿದ್ದು, ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದಲ್ಲಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅರ್ಹರ್ ಫೈಝಿ ದುಆಶೀರ್ವಚನ ನೀಡಲಿದ್ದಾರೆ. ಸ್ವದಕತುಲ್ಲಾ ಫೈಝಿ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಅಲ್ಲದೆ, ಅನೇಕ ಉಲಮ ಉಮರಾಗಳು, ನೇತಾರರು ಭಾಗವಹಿಸಲಿದ್ದಾರೆ ಎಂದು ಎಸ್ಕೆಎಸ್ಸೆಸ್ಸೆಫ್‌ನ ಮುಲ್ಕಿ ಕೊಲ್ನಾಡು ಘಟಕ ಪ್ರಕಟನೆಯಲ್ಲಿ ತಿಳಿಸಿದೆ.