ನಿಮ್ಮ ಕೈಯಲ್ಲಿರುವ ಸ್ಮಾರ್ಟ್‌ಫೋನ್, ಟ್ಯಾಬ್ ಎಷ್ಟು ವಿಷಾನಿಲಗಳನ್ನು ಹೊರಸೂಸುತ್ತಿವೆ ಗೊತ್ತೇ ?

Update: 2016-10-22 06:51 GMT

ವಾಷಿಂಗ್ಟನ್, ಅಕ್ಟೋಬರ್ 22: ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಉಪಯೋಗಿಸುವವರೇ ಎಚ್ಚರ. ಕಾರ್ಬನ್ ಮೊನೊಕ್ಸೈಡ್ ಸಹಿತ ಇರುವ ನೂರಕ್ಕೂ ಅಧಿಕ ವಿಷಾನಿಲಗಳನ್ನು ಈ ಫೋನ್‌ಗಳಲ್ಲಿರುವ ಲಿಥಿಯಂ ಬ್ಯಾಟರಿಗಳು ಉತ್ಪಾದಿಸುತ್ತಿವೆ ಎಂದು ಸಂಶೋಧಕರು ಸಂಶೋಧಿಸಿದ್ದಾರೆ ಎಂದು ರದಿಯಾಗಿದೆ.

ಈವಿಷಾನಿಲಗಳು ಚರ್ಮಕ್ಕೆ, ಕಣ್ಣುಗಳಿಗೆ, ಉಸಿರಾಟಕ್ಕೆ ಹಾನಿಕರವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಯುಎಸ್‌ನ ಎಬ್‌ಬಿಸಿ ಡಿಫನ್ಸಿನ ಮತ್ತು ಚೀನದ ಸಿಂಗ್ಹುವ ವಿಶ್ವವಿದ್ಯಾನಿಲಯದ ಸಂಶೋಧಕರು ಇದಕ್ಕೆ ಸಂಬಂಧಿಸಿದ ಅಧ್ಯಯನವನ್ನು ನಡೆಸಿದ್ದಾರೆ.

 ಫೋನ್‌ನ ಹೆಚ್ಚು ಬಿಸಿ, ಹಾಳಾಗುವುದು, ಸೂಕ್ತವಲ್ಲದ ಚಾರ್ಜರ್‌ಗಳ ಬಳಕೆ ಇವುಗಳಿಂದಾಗುವ ಅಪಾಯಗಳ ಕುರಿತು ಬಳಕೆದಾರರಿಗೆ ಗೊತ್ತಿಲ್ಲ ಎಂದು ಸಂಶೋಧಕರು ಬೆಟ್ಟು ಮಾಡಿದ್ದಾರೆ.ಇನ್ನೂರು ಕೋಟಿಯಷ್ಟಿರುವ ಫೋನ್‌ಗಳ ರಿಚಾರ್ಜೆಬಲ್ ಬ್ಯಾಟರಿ ಲಿಥಿಯಂ ಆಗಿದೆ ಎಂದು ಈ ಬ್ಯಾಟರಿಗಳಿಗೆ ಹೆಚ್ಚಿನ ಪ್ರಚಾರವನ್ನು ನೀಡಲಾಗುತ್ತಿದೆ ಎಂದು ಎನ್‌ಬಿಸಿ ಡಿಫೆನ್ಸ್‌ನ ಪ್ರೊಫೆಸರ್ ಜೀಸನ್ ಹೇಳಿದ್ದಾರೆ. ವಿಷಾನಿಲಗಳು ಹೇಗೆ ಹೊರಡುತ್ತಿವೆ ಮತ್ತು ಅದಕ್ಕೆ ಕಾರಣಗಳೇನೆಂದು ಕೂಡಾ ಪ್ರೊಫೆಸರ್ ಮತ್ತು ಸಂಗಡಿಗರು ವಿವರಿಸಿದ್ದಾರೆ.

 ಸಂಪೂರ್ಣ ಚಾರ್ಜು ಆದ ಬ್ಯಾಟರಿ ಪೂರ್ಣಚಾರ್ಜು ಆಗದ ಬ್ಯಾಟರಿಗಿಂತ ಹೆಚ್ಚು ವಿಷಾನಿಲಗಳನ್ನು ಬಿಡುಗಡೆಗೊಳಿಸುತ್ತವೆ ಎಂದು ಇವರು ಹೇಳುತ್ತಾರೆ. ಇದು ಮನುಷ್ಯರ ಏಕಾಗ್ರತೆಗೆ ಹಾನಿಯೊಡ್ಡುತ್ತಿದೆ. ಸೋರಿಕೆ ಆಗುತ್ತದೆಯೆಂದದರೆ ಕಾರು, ವಿಮಾನ, ಮುಂತಾದವುಗಳ ಕಿಟಕಿಬಾಗಿಲು ಬಂದ್ ಮಾಡಿಟ್ಟಿದ್ದರೆ ಸ್ವಲ್ಪಸಮಯದಲ್ಲಿ ಕಾರ್ಬನ್ ಮೊನೋಕ್ಸೈಡ್ ನಿಂದ ಗಂಭೀರ ಸಮಸ್ಯೆಗಳು ತಲೆದೋರಬಹುದೆಂದು ಸಂಶೋಧಕರು ತಿಳಿಸಿದ್ದಾರೆಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News