ಯೆನೆಪೊಯ ವಿ.ವಿ. ಘಟಿಕೋತ್ಸವಕ್ಕೆ ಡಾ.ಸಿ.ಎನ್.ಆರ್.ರಾವ್ ಗೈರು

Update: 2016-10-22 07:32 GMT

ಮಂಗಳೂರು, ಅ.22: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಯೆನೆಪೊಯ ವಿ.ವಿ.ಯ ಘಟಿಕೋತ್ಸವ  ಮತ್ತು ಡಾಕ್ಟರೇಟ್ ಪ್ರದಾನ ಕಾರ್ಯಕ್ರಮಕ್ಕೆ ಭಾರತರತ್ನ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಗೈರು ಹಾಜರಾಗಿದ್ದಾರೆ.

ವಿಪರೀತ ಮಂಜು ಕವಿದ ವಾತಾವರಣದಿಂದಾಗಿ ಪ್ರೊ. ಸಿ.ಎನ್.ಆರ್. ರಾವ್ ಅವರು ಪ್ರಯಾಣಿಸುತ್ತಿದ್ದ  ಜೆಟ್ ಏರ್ ವೇಸ್ ನ ವಿಶೇಷ ವಿಮಾನವು ಬೆಂಗಳೂರಿನಲ್ಲಿ ವಿಮಾನ ಟೇಕಾಫ್ ಆಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ  ಅವರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.  

ಯೆನೆಪೊಯ ವಿಶ್ವವಿದ್ಯಾನಿಲಯದ 6ನೆ ಘಟಿಕೋತ್ಸವ ಇಂದು ನಡೆಯುತ್ತಿದ್ದು, ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಹಾಗೂ ಭಾರತ ರತ್ನ ಪ್ರೊ. ಡಾ. ಸಿ.ಎನ್.ಆರ್. ರಾವ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಲಾಗಿತ್ತು. ಮಂಗಳೂರಿಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಸಿ.ಎನ್.ಆರ್. ರಾವ್ ಅವರನ್ನು ಸಂಭ್ರಮದಿಂದ ಸ್ವಾಗತಿಸಲು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಆದರೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕೊನೆಕ್ಷಣದಲ್ಲಿ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದು ಅವರ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News