×
Ad

ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಿಂದ ಹಿಂದೆ ಸರಿಯಲು ನಿರ್ಧರಿಸಿದ ದಕ್ಷಿಣಾಫ್ರಿಕ

Update: 2016-10-22 13:30 IST

ಹೇಗ್, ಅಕ್ಟೋಬರ್22: ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಿಂದ ಹಿಂದೆಸರಿಯುತ್ತಿರುವುದಾಗಿ ದಕ್ಷಿಣಾಫ್ರಿಕ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಬಾನ್‌ಕಿಮೂನ್‌ಅವರಿಗೆ ಅಧಿಕೃತವಾಗಿ ತಿಳಿಸಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ವಿಶ್ವಸಂಸ್ಥೆಯ ಕೋರ್ಟಿನಿಂದ ಹಿಂದೆ ಸರಿಯುವುದಕ್ಕಾಗಿ ಪೂರ್ವ ಆಫ್ರಿಕನ್ ದೇಶವಾದ ಬುರಾಂಡಿಯು ಕಳೆದವಾರ ಕಾನೂನು ಜಾರಿ ಮಾಡಿತ್ತು. ದಕ್ಷಿಣಾಕಫ್ರಿದ ವಿದೇಶ ಸಚಿವ ಮಯಿತೆ ಎಂಕೋನ ಮಸಬೆನ್ ವಿಶ್ವಸಂಸ್ಥೆಗೆ ಪತ್ರದ ಮೂಲಕ ಕ್ರಿಮಿನಲ್ ಕೋರ್ಟಿನಿಂದ ಹಿಂದೆ ಸರಿಯುವ ನಿರ್ಧಾರವನ್ನು ಪತ್ರದ ಮೂಲಕ ತಿಳಿಸಿದ್ದಾರೆಂದು ರಾಯಿಟರ್ಸ್ ಬಹಿರಂಗಪಡಿಸಿದೆ.

ಸಂಘರ್ಷಗಳಿಗೆ ಸಂಬಂಧಿಸಿದ ದಕ್ಷಿಣಾಫ್ರಿಕದ ನಿಲುವುಗಳು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ವ್ಯಾಖ್ಯಾನಗಳಿಗೆ ಸರಿಹೊಂದುವುದಿಲ್ಲ ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಆದರೆ ಈಬಗ್ಗೆ ದಕ್ಷಿಣಾಫ್ರಿಕ ಮತ್ತು ವಿಶ್ವಸಂಸ್ಥೆ ಅಧಿಕೃತ ಪ್ರತಿಕ್ರಿಯೆಯನ್ನು ಇನ್ನಷ್ಟೇ ನೀಡಬೇಕಿದೆ.ಅಂತಾರಾಷ್ಟ್ರೀಯ ಕೋರ್ಟು ಜನಾಂಗೀಯ ಹತ್ಯೆ ಆರೋಪ ಹೊರಿಸಿದ ಸುಡಾನ್ ಅಧ್ಯಕ್ಷ ಉಮರ್ ಹಸನ್ ಅಲ್‌ಬಶೀರ್, ಕಳೆದ ವರ್ಷ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಆಫ್ರಿಕನ್ ಶೃಂಗ ಸಭೆಗೆ ಬಂದಿದ್ದಾಗ ಅವರನ್ನು ಬಂಧಿಸಲು ದಕ್ಷಿಣಾಫ್ರಿಕ ನಿರಾಕರಿಸಿತ್ತು. ಈ ಘಟನೆಗಾಗಿ ಅಂತಾರಾಷ್ಟ್ರೀಯ ಕೋರ್ಟು ದಕ್ಷಿಣಾಫ್ರಿಕವನ್ನು ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ದಕ್ಷಿಣಾಫ್ರಿಕ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಿಂದ ಹಿಂದೆ ಸರಿಯಲು ತೀರ್ಮಾನಿಸಿದೆ ಎನ್ನಲಾಗುತ್ತಿದೆ ಎಂದು ವರದಿ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News